ಗಾಯನ : ರಾಘವೇಂದ್ರ ಬೀಜಾಡಿ
ಸಂಗೀತ : ರಾಘವೇಂದ್ರ ಬೀಜಾಡಿ
ಸಾಹಿತ್ಯ : ವಿನಾಯಕ ಅರಳಸುರಳಿ
ಸಿಡಿಲಿರದ ಮುಗಿಲೇ
ಮಗುವಿರದ ಮಡಿಲೇ
ಕೊರಗದಿರು ಕುಡಿವ
ನೀರಿರದ ಕಡಲೇ
ಸಿಡಿಲಿರದ ಮುಗಿಲೇ
ಮಗುವಿರದ ಮಡಿಲೇ
ಕೊರಗದಿರು ಕುಡಿವ
ನೀರಿರದ ಕಡಲೇ
ಮರುಗುವರು ಇಲ್ಲಿಲ್ಲ
ನಿನ್ನ ಮೊರೆಗೆ
ಮರುಗುವರು ಇಲ್ಲಿಲ್ಲ
ನಿನ್ನ ಮೊರೆಗೆ
ಸಿಡಿಲಿರದ ಮುಗಿಲೇ
ಮಗುವಿರದ ಮಡಿಲೇ
ಕೊರಗದಿರು ಕುಡಿವ
ನೀರಿರದ ಕಡಲೇ
ಮರುಗುವರು ಇಲ್ಲಿಲ್ಲ
ನಿನ್ನ ಮೊರೆಗೆ
ಮರುಗುವರು ಇಲ್ಲಿಲ್ಲ
ನಿನ್ನ ಮೊರೆಗೆ
♫♫♫♫♫♫♫♫♫♫♫♫
ಮುರಿದ ಮರ ತಂತಾನೆ ಚಿಗುರಬೇಕು
ನದಿ ಯಾರ ಬಳಿ ದಾರಿ ಕೇಳಬೇಕು
ಕಣ್ಣಲ್ಲೇ ಕಂದೀಲು ಇರುವಾಗ ಇರುಳಲ್ಲಿ
ಚಂದಿರನ ಬಳಿಯೇಕೆ ಬೇಡಬೇಕು
ಮುರಿದ ಮರ ತಂತಾನೆ ಚಿಗುರಬೇಕು
ನದಿ ಯಾರ ಬಳಿ ದಾರಿ ಕೇಳಬೇಕು
ಕಣ್ಣಲ್ಲೇ ಕಂದೀಲು ಇರುವಾಗ ಇರುಳಲ್ಲಿ
ಚಂದಿರನ ಬಳಿಯೇಕೆ ಬೇಡಬೇಕು
ಭಾವಗಳ ಮುಗಿಲು
ಹೃದಯದೊಳಗಿರಲು
ಮಳೆ ಸುರಿಸದಿರುವವೇ ಈ ಕಂಗಳು
ಭಾವಗಳು ಮುಗಿಲು
ಹೃದಯದೊಳಗಿರಲು
ಮಳೆ ಸುರಿಸದಿರುವವೇ ಈ ಕಂಗಳು
ಸೆಳೆವ ಸುಳಿಯಾಚೆ
ನೆಮ್ಮದಿಯ ದಡವೋ
ಮುಳುಗಲೇ ಬೇಕು
ನೀ ಏರೋ ಮೊದಲು
ಸೆಳೆವ ಸುಳಿಯಾಚೆ
ನೆಮ್ಮದಿಯ ದಡವೋ
ಮುಳುಗಲೇ ಬೇಕು
ನೀ ಏರೋ ಮೊದಲು
ಸಿಡಿಲಿರದ ಮುಗಿಲೇ
ಮಗುವಿರದ ಮಡಿಲೇ
ಕೊರಗದಿರು ಕುಡಿವ ನೀರಿರದ ಕಡಲೇ
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ
♫♫♫♫♫♫♫♫♫♫♫♫
ಎಣ್ಣೆ ಮುಗಿಡೊಡನೆ ಮುಗಿದೀತೆ ಬೆಳಕು
ಉರಿಯುಂಟು ಎದೆಯಲ್ಲೇ ಕೇಳೇ ಹಣತೆ
ಇರುಳಿನ ದಾರಿಯಲೇ ಬರಬೇಕು ಹಗಲು
ಬಿರುಗಾಳಿ ಮುಗಿಡೊಡನೆ ನಿನ್ನ ಸರತಿ
ಎಣ್ಣೆ ಮುಗಿಡೊಡನೆ ಮುಗಿದೀತೆ ಬೆಳಕು
ಉರಿಯುಂಟು ಎದೆಯಲ್ಲೇ ಕೇಳೇ ಹಣತೆ
ಇರುಳಿನ ದಾರಿಯಲೇ ಬರಬೇಕು ಹಗಲು
ಬಿರುಗಾಳಿ ಮುಗಿಡೊಡನೆ ನಿನ್ನ ಸರತಿ
ಕೀಳಲೇ ಬೇಕು
ಚುಚ್ಚಿರುವ ಮುಳ್ಳ
ನೋವಿಗೆ ಅಂಜಿದರೆ ಮಾಯಲೆಂತು
ಕೀಳಲೇ ಬೇಕು
ಚುಚ್ಚಿರವ ಮುಳ್ಳ
ನೋವಿಗೆ ಅಂಜಿದರೆ ಮಾಯಲೆಂತು
ಜೀವನದ ಬತ್ತಿ ಉರಿಯುಲೇ ಬೇಕು
ಸಾವಿಗೆ ಹೆದರಿದರೆ ಬಾಳಲೆಂತು
ಜೀವನದ ಬತ್ತಿ ಉರಿಯಲೇ ಬೇಕು
ಸಾವಿಗೆ ಹೆದರಿದರೆ ಬಾಳಲೆಂತು
ಸಿಡಿಲಿರದ ಮುಗಿಲೇ
ಮಗುವಿರದ ಮಡಿಲೇ
ಕೊರಗದಿರು ಕುಡಿವ
ನೀರಿರದ ಕಡಲೇ
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ
No comments:
Post a Comment
Write Something about PK Music