Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಓಬಿರಾಯ ಅಂದರೆ ಯಾರು. ಓಬಿರಾಯನ ಕಾಲ ಅಂದರೆ ಏನು.



ನಾವೆಲ್ಲರೂ ಚಿಕ್ಕಂದಿನಿಂದ ಓಬಿರಾಯ ಅನ್ನೋ ಪದವನ್ನು ಕೇಳಿರುತ್ತೇವೆ ಮತ್ತು ಉಪಯೋಗಿಸಿರುತ್ತೇವೆ. “ಓಬಿರಾಯನ ಕಾಲದವನು ನೀನು” “ಇದು ಓಬಿರಾಯನ ಕಾಲದ್ದು” ಅಂತ ತಮಾಷೆಗೆ ಹೇಳಿರುವುದು ನಮ್ಮ ನೆನಪಿಗೆ ಇರುತ್ತದೆ. ಆದರೆ ಓಬಿರಾಯ ಅಂದರೆ ಯಾರು ಅದರ ಅರ್ಥವೇನು ಎಂಬುದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಅದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.

        ಈಗಿನ ಕಾಲದ ಯುವಕರಿಗೆ ಹಳೆಯ ಸಂಪ್ರದಾಯವನ್ನು ಹೇಳಿದಾಗ ‘ಓಬಿರಾಯನ ಕಾಲದ್ದನ್ನು ಹೇಳಬೇಡ ನನಗೆ’ ಅನ್ನುವುದು ಸರ್ವೇಸಾಮಾನ್ಯ. ಓಬಿರಾಯ ಅಂದರೆ ಹಳೆಯ ಕಾಲದವನು, ಹಳೆಯ ಕಾಲದ ವ್ಯಕ್ತಿ ಇರಬಹುದೇನೋ ಎಂಬ ನಂಬಿಕೆ ಜನರಲ್ಲಿ ಇಂದಿಗೂ ಇದೆ ಆದರೆ ಅದರ ಅರ್ಥ ಬೇರೆಯೇ ಇದೆ. ಅದೇನೆಂದರೇ..

        ಓಬಿರಾಯ ಎಂದರೆ ಯಾವುದೋ ವ್ಯಕ್ತಿಯ ಹೆಸರಲ್ಲ ಬದಲಿಗೆ ಅದರ ಪೂರ್ಣ ರೂಪ Old British Royal ( O. B. Roy ). Old British Family ಯ ರಾಜ ಮನೆತನದ  ವಂಶಸ್ಥರು ತಮ್ಮ ಆಡಳಿತಾವಧಿಯಲ್ಲಿ ತಯಾರಿಸಿದ ಕಾನೂನಾಗಿದೆ.

        ಹಿಂದೆ ಬ್ರಿಟಿಷರು ಭಾರತವನ್ನು ಆಳುವ ಸಂದರ್ಭದಲ್ಲಿ ಕಾನೂನು ಕ್ರಮ ಜರುಗಿಸಬೇಕಾದರೆ

ಬ್ರಿಟಿಷರ ಹಳೆಯ ಕಾನೂನು (Old British Royal) ಏನು ಹೇಳುತ್ತೆ ಅಂತ ನೋಡುತ್ತಿದ್ದರು, ಮುಂದೆ ಅದೇ ಅಭ್ಯಾಸ ಆಗಿ ಈ ಫೈಲು ಯಾವ ಕಾಲದ್ದಪ್ಪ ಅಂದರೆ ಓಬಿರಾಯನ ಕಾಲದ್ದು ಅನ್ನುವ ಪದ ರೂಢಿಗೆ ಬಂತು. ಈ ಪದವನ್ನು ಸಾಮಾನ್ಯ ಜನರು ಕೂಡ ಉಪಯೋಗಿಸುವಷ್ಟು ರೂಡಿಯಾಗಿ ಹೋಗಿದೆ.

 

ಬ್ರಿಟೀಷರ ಕಾಲದ ಕಟ್ಟುನಿಟ್ಟಾದ ಕಾನೂನು ಕ್ರಮಗಳು



Obiraoy, Obirai, O B Roay, OBRoy
What is OB Raoy
Who is Obiraoy 

No comments:

Post a Comment

Write Something about PK Music

new1

new2

new5