♪ Film: Raymo
♪ Music: Arjun Janya
♪ Song: Ninnade Ninnade - Lyrical Video
♪ Singers: Indu Nagaraj, Aniruddha Sastry, Sanjith Hegde
♪ Lyrics: Pavan Wadeyar
♪ Starcast: Ishan, Ashika Ranganath & Others
ನಿನ್ನದೇ, ನಿನ್ನದೇ, ಆಲೋಚನೆ ಈಗ ನನಗೆ
ಪ್ರೇಮವೇ, ಪ್ರೇಮವೇ, ಅರೆತಿಲ್ಲ ಇವನೊಂದು ಕಲ್ಲೇ
ಕನಸಿನಂತೆ ಭಾಸವಾದೆ ನೀನು ನನಗೆ
ಕರೆದೆ ನನ್ನ ಮನದ ಮನೆಗೆ ಬಾರದೆ ಹೋದೆ ನೀ…
ಪ್ರಣಯ ಗಿಣಯ ಸುಳ್ಳು ಕಂತೆ
ಒಲವು ಗಿಲವು ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ ನಾನು….
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ ನಾನು ನಾನೇ…
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ನೆರಳಿನಂತೆ ನಿನ್ನ… ಜೊತೆಗೆ ಬರುವೆ ಜಾಣ…
ಹಿಡಿದೆಂದು ಕೈ ಭುಜಕೆ ಒರಗಿ
ರಾಗಕ್ಕೆ ಕರಗಿ ಸನಿಹಕ್ಕೆ ಮರುಗಿ
ಕರೆದೆ ನನ್ನ ಮನದ ಮನೆಗೆ ಬಾರದೆ ಹೋದೆ ನೀ…
ಪ್ರಣಯ ಗಿಣಯ ಸುಳ್ಳು ಕಂತೆ
ಒಲವು ಗಿಲವು ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ ನಾನು
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ ನಾನು ನಾನೇ..
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ನಿನ್ನಲೇನೆ ನಾನು.. ಕಳೆದು ಹೋಗಲೇನು..
ಒಲವೆಂಬ ನಿಧಿಯು ದೊರೆತಂಥ ಖುಷಿಯು
ಪೂಜಿಸಲು ಮುಡಿಪು ಅಪರೂಪದ ಚೆಲುವು
ನಿನ್ನ ಮನದ ಕದವ ದಾಟಿ ಬಂದೆ ನಾನು
ಮಿತಿಯ ಮೀರಿ ಬಂದ ಮನವ ಬಂಧಿಸು ನೀನು ಇನ್ನು….
ನಿನ್ನದೇ.. ನಿನ್ನದೇ.. ಆಲೋಚನೆ ಈಗ ನನಗೆ
ಪ್ರೇಮವೇ.. ಪ್ರೇಮವೇ.. ಬೇರೇನು ಬೇಕಿಲ್ಲ ನಮಗೆ
ಕನಸಿನಂತೆ ಭಾಸವಾದೆ ನೀನು ನನಗೆ
ಕನಸು ನನಸು ಮಾಡಲೆಂದು ಬಂದೆ ನಿನ್ನೆಡೆಗೆ ಓಓಓ
ಪ್ರಣಯ ಗಿಣಯ ವಜ್ರದಂತೆ
ಒಲವು ಗಿಲವು ಚಿನ್ನದಂತೆ
ಮುತ್ತಿನೊಳಗೆ ಧಾರೆಯಂತೆ ನಮಗೆ..
ನನ್ನ ಗಮನ ನೀನೆಯಂತೆ
ಗಗನ ಕೂಡ ಬಾಗುವಂಥ ಪ್ರೇಮಿ.. ನಾನು..
No comments:
Post a Comment
Write Something about PK Music