ಚಿತ್ರ: ಚಿನ್ನದ ಗೊಂಬೆ
ಸೇವಂತಿಗೆ ಚೆಂಡಿನಂಥ
ಮುದ್ದು ಕೋಳಿ
ತಾಯಿ ಮಡಿಲಿನಲಿ ಬೀಡು ಬಿಟ್ಟ
ಮುದ್ದು ಕೋಳಿ
ಸೇವಂತಿಗೆ ಚೆಂಡಿನಂಥ
ಮುದ್ದು ಕೋಳಿ
ತಾಯಿ ಮಡಿಲಿನಲಿ ಬೀಡು ಬಿಟ್ಟ
ಮುದ್ದು ಕೋಳಿ
♬♬♬♬♬♬♬♬♬♬♬♬
ಅಮ್ಮನಿತ್ತದೀ ಅಮೃತ
ಎನುವ ಕೋಳಿ
ಅಮ್ಮನಿತ್ತದೀ ಅಮೃತ
ಎನುವ ಕೋಳಿ
ಒಳ್ಳೆ ನಲ್ಮೆಯಿಂದ ಬೆಳೆದು ಬಂದ
ಮುದ್ದು ಕೋಳಿ
ಸೇವಂತಿಗೆ ಚೆಂಡಿನಂಥ
ಮುದ್ದು ಕೋಳಿ
ತಾಯಿ ಮಡಿಲಿನಲಿ ಬೀಡು ಬಿಟ್ಟ
ಮುದ್ದು ಕೋಳಿ
♬♬♬♬♬♬♬♬♬♬♬♬
ತಾಯಿ ತೊರೆದು ಘಳಿಗೆ ಕೂಡ
ಅಗಲಲಾರದು
ತನ್ನ ಸೋದರರ ಮರೆತು ಬಿಟ್ಟು
ಮೆರೆಯಲಾರದು
ತಾಯಿ ತೊರೆದು ಘಳಿಗೆ ಕೂಡ
ಅಗಲಲಾರದು
ತನ್ನ ಸೋದರರ ಮರೆತು ಬಿಟ್ಟು
ಮೆರೆಯಲಾರದು
ಜಾಣ ಮರಿ ಮುದ್ದು ಕೋಳಿ
ಮಾತನಾಡದು
ಜಾಣ ಮರಿ ಮುದ್ದು ಕೋಳಿ
ಮಾತನಾಡದು
ತನ್ನ ಸಾಕಿದವರ ಬಿಟ್ಟು ದೂರ
ಓಡಿ ಹೋಗದು
ಸೇವಂತಿಗೆ ಚೆಂಡಿನಂಥ
ಮುದ್ದು ಕೋಳಿ
ತಾಯಿ ಮಡಿಲಿನಲಿ ಬೀಡು ಬಿಟ್ಟ
ಮುದ್ದು ಕೋಳಿ
♬♬♬♬♬♬♬♬♬♬♬♬
ಪ್ರೇಮವಿರುವ ಮನೆಯದುವೆ
ನಿತ್ಯ ಸುಂದರ
ಆ ಪ್ರೇಮಭರಿತ ಹೃದಯವದು
ದೇವ ಮಂದಿರ
ಪ್ರೇಮವಿರುವ ಮನೆಯದುವೆ
ನಿತ್ಯ ಸುಂದರ
ಆ ಪ್ರೇಮಭರಿತ ಹೃದಯವದು
ದೇವ ಮಂದಿರ
ದೇವನವನೆ ಪ್ರೇಮರೂಪ
ದಯಾಸಾಗರ
ದೇವನವನೆ ಪ್ರೇಮರೂಪ
ದಯಾಸಾಗರ
ಆ ದೈವರಕ್ಷೆ ಕಾವುದೆಲ್ಲ
ಪ್ರೇಮಜೀವರ
ಸೇವಂತಿಗೆ ಚೆಂಡಿನಂಥ
ಮುದ್ದು ಕೋಳಿ
ತಾಯಿ ಮಡಿಲಿನಲಿ ಬೀಡು ಬಿಟ್ಟ
ಮುದ್ದು ಕೋಳಿ
ಸೇವಂತಿಗೆ ಚೆಂಡಿನಂಥ
ಮುದ್ದು ಕೋಳಿ
ತಾಯಿ ಮಡಿಲಿನಲಿ ಬೀಡು ಬಿಟ್ಟ
ಮುದ್ದು ಕೋಳಿ
No comments:
Post a Comment
Write Something about PK Music