ಚಿತ್ರ: ನಿನ್ನೇ ಪ್ರೀತಿಸುವೆ
ರಮೇಶ್, ಶಿವರಾಜಕುಮಾರ್, ರಾಶಿ
ಸಂಗೀತ: ರಾಜೇಶ್ ರಾಮನಾಥ್
ಗಾಯಕ: ರಾಜೇಶ್ ಕೃಷ್ಣನ್
ಸಾಹಿತ್ಯ: ಕೆ ಕಲ್ಯಾಣ್
ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೆ ಬಿಟ್ಟಳು ಮನಸು ಬರೆದಂತೆ
ನಿನ್ನೇ ಪ್ರೀತಿಸುವೆ ಎಂದು
ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
♫♫♫♫♫♫♫♫♫♫♫♫
ಎಷ್ಟೋ ಚೈತ್ರಗಳಲ್ಲಿ
ಎಷ್ಟೋ ಚಿಗುರುಗಳಲ್ಲಿ
ಕಂಡೆ ನಿನ್ನ ಗುರುತನ್ನೂ
ಎಷ್ಟೋ ದಿಕ್ಕುಗಳಲ್ಲಿ
ಎಷ್ಟೋ ಬೆಳಕುಗಳಲ್ಲಿ
ಕಂಡೆ ನಿನ್ನ ನೆರಳನ್ನೂ
ನಿನ್ನ ನಗುವೆ ನನ್ನೆದೆಗೆ
ಅಮೃತ ಕಳಶ
ನಿನ್ನ ಸ್ಪರ್ಶವೇ ಈ ಉಸಿರಿಗೆ
ಮಾಯದ ಹರುಷ
ನಿನ ನೋಟದ ಹೊಂಬೆಳಕಲಿ
ಒಂದು ನಿಮಿಷ
ನಾನಿದ್ದರೆ ಅದೆ ನನಗೆ
ಸಾವಿರ ವರುಷ
ಎನ್ನುತ್ತಿದೆ ಈ ಮನಸು
ನಿನ್ನೇ ಪ್ರೀತಿಸುವೆ ಎಂದು
ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
♫♫♫♫♫♫♫♫♫♫♫♫
ಎಷ್ಟೋ ಕನಸುಗಳಲ್ಲಿ
ಆಸೆಯ ನೀರನು ಚೆಲ್ಲಿ
ಬೆಳೆಸಿದೆ ಒಲವನ್ನು
ಎಷ್ಟೋ ವೃತಗಳ ಮಾಡಿ
ಕಾಯುವ ಮಂತ್ರವ ಹಾಡಿ
ಬೇಡಿಕೊಂಡೆ ಜೊತೆಯನು
ನಿನ ಹೃದಯಕೆ ಕಣ್ಣಿಟ್ಟು
ಕಾವಲು ಇರುವೆ
ನನ ಹೃದಯವ ಕೈಗಿಟ್ಟು
ಕಾಣಿಕೆ ಕೊಡುವೆ
ನಿನ್ನುಸಿರಿಗೆ ನನ್ನುಸಿರಿನ
ಸ್ನಾನವ ಮಾಡಿ
ಪ್ರತಿ ಹನಿಯಲು ನಿನ ಹೆಸರನು
ಬರೆದು ಬಿಡುವೆ
ಈಗಿದ್ದರೂ ತಿಳಿಲಿಲ್ಲ
ನಿನ್ನೇ ಪ್ರೀತಿಸುವೆ ಎಂದು
ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೆ ಬಿಟ್ಟಳು ಮನಸು ಬರೆದಂತೆ
ನಿನ್ನೇ ಪ್ರೀತಿಸುವೆ ಎಂದು
ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು..
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
No comments:
Post a Comment
Write Something about PK Music