ಚಿತ್ರ: ಪ್ರೀತಿವಾತ್ಸಲ್ಯ
ಗಾಯಕರು: ಎಸ್.ಪಿ.ಬಾಲು
ಸಂಗೀತ: ರಾಜನ್-ನಾಗೇಂದ್ರ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭ ಮಿಲನ
ಓ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
♫♫♫♫♫♫♫♫♫♫♫♫
ದದ್ದಗ ದದ್ದದದ್ದ ತಾರಾರಾರಾರಾರಾ
ದದ್ದಗ ದದ್ದದದ್ದ ತಾರಾರಾರಾರಾರಾ
ದಗದಾ ದಗದಾ ದಗದಾ ದಗದಾ
ರೂರು ರೂರು ರೂರು
ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಥ ವೇಳೆಯಲ್ಲಿ
ನಾ ಹಾಡುವಾ ಈ ಹಾಡಿನ
ತಾಳ ಮೇಳ ಸೇರಿ ನಿಮ್ಮ ತೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿಮಾತು ತಮ್ಮಲ್ಲೇ ಆಡಿದಾಗ
ಆ ಮೌನದಾ ಪಿಸು ಮಾತಿಗೇ
ಸಾಟಿಯಾದ ಯಾವ
ಪ್ರೇಮ ಕಾವ್ಯವಿಲ್ಲ
ಹೃದಯಾ ಹಗುರಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭ ಮಿಲನ
ಹೇ ಹಾ ಹೋ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
♫♫♫♫♫♫♫♫♫♫♫♫
ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂಥ ಪತಿಯಲ್ಲಿ ಪತ್ನಿಯ ಪ್ರೀತಿ
ಒಡ ಹುಟ್ಟದಾ ಸಂಬಂಧವೂ
ತರುವಂಥ ಸವಿಯಾದ
ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೇಯಸಿಯು
ತೋರುವ ಪ್ರೀತಿ
ನಿಜಸ್ನೇಹ ತಂದಂಥ ನಿರ್ಮಲ ಪ್ರೀತಿ
ಈ ಪ್ರೀತಿಯೂ ವಿಶ್ವಾಸವೂ
ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸು ಹಾಯಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭ ಮಿಲನ
ಹೇ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
No comments:
Post a Comment
Write Something about PK Music