Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Deepavirada daariyalli Lyrics - C Ashwath song Lyrics - ದೀಪವಿರದ ದಾರಿಯಲ್ಲಿ

Deepavirada daariyalli Song Lyrics from Spandana Kannada Album, Kanada Kadalige Song was Released on Lahai Music Youtube Channel.

 

Spandana Kannada Album Released on 31 August 2014, Album Directed by C. Ashwath.

 

Deepavirada daariyalli Kannada Song Lyrics by G. S Shivarudrappa, and the Song Composed by C Ashwath. Song Sung by C. Ashwath.


About the Song

Album

Spandana

Song

Deepavirada daariyalli

Music

C Ashwath

Lyrics

G. S Shivaraudrappa

Singer

C Ashwath

Music Label

Lahari Music



ದೀಪವಿರದ ದಾರಿಯಲ್ಲಿ, ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ
ಕಂಬನಿಗಳ ತಲಾತಲದಿ, ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೆ
ಉಸಿರನ್ನಿಡುವೆ, ಹೆಸರ ಕೊಡುವೆ
ಉಸಿರನ್ನಿಡುವೆ, ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ, ಬನ್ನಿ ನನ್ನ ಹೃದಯಕೆ

ನೀಲಿಯಲ್ಲಿ ಮೈಯ್ಯಿಲ್ಲದೆ ತೇಲಾಡುವ ಹನಿಗಳೇ
ಬಾಯಿಲ್ಲದ ಮೌನದಲ್ಲಿ ಅಲೆಯುತಿರುವ ದನಿಗಳೇ
ನೀಲಿಯಲ್ಲಿ ಮೈಯ್ಯಿಲ್ಲದೆ ತೇಲಾಡುವ ಹನಿಗಳೇ
ಬಾಯಿಲ್ಲದ ಮೌನದಲ್ಲಿ ಅಲೆಯುತಿರುವ ದನಿಗಳೇ
ಉಸಿರನಿಡುವೆ, ಹೆಸರ ಕೊಡುವೆ
ಉಸಿರನಿಡುವೆ, ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ, ಬನ್ನಿ ನನ್ನ ಹೃದಯಕೆ

ಜಲವಿಲ್ಲದ ನೆಲಗಳಲ್ಲಿ ಕಮರುತಿರುವ ಕುಡಿಗಳೇ
ಬಿರು ಬಿಸಿಲಿನ ತುಳಿತದಲ್ಲಿ ಸೊರಗಿ ಹೋದ ಮಿಡಿಗಳೇ
ಜಲವಿಲ್ಲದ ನೆಲಗಳಲ್ಲಿ ಕಮರುತಿರುವ ಕುಡಿಗಳೇ
ಬಿರು ಬಿಸಿಲಿನ ತುಳಿತದಲ್ಲಿ ಸೊರಗಿ ಹೋದ ಮಿಡಿಗಳೇ
ಉಸಿರನಿಡುವೆ ಹೆಸರ ಕೊಡುವೆ
ಉಸಿರನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ, ಬನ್ನಿ ನನ್ನ ಹೃದಯಕೆ


ಶೃತಿಯಿಲ್ಲದ ವಾದ್ಯದಲ್ಲಿ ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿವುದುರಿದ ಹೊಂಗನಸಿನ ಮರಿಗಳೇ
ಶೃತಿಯಿಲ್ಲದ ವಾದ್ಯದಲ್ಲಿ ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿವುದುರಿದ ಹೊಂಗನಸಿನ ಮರಿಗಳೇ
ಉಸಿರನಿಡುವೆ ಹೆಸರ ಕೊಡುವೆ
ಉಸಿರನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ, ಬನ್ನಿ ನನ್ನ ಹೃದಯಕೆ

ದೀಪವಿರದ ದಾರಿಯಲ್ಲಿ, ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ

---------------------------------------------------------

Spandana Album Songs Lyrics

---------------------------------------------------------

Kaanada Kadalige Song Karaoke by PK Music




Like My FaceBook Page : PK Music Lyrics

If you want any Kannada Sing along Karaoke  PK Music Karaoke World

If you find any mistakes in this Page of  Lyrics free feel to correct it and Mention in the Comment Box.



Deepavirada dariyalli Lyrics

No comments:

Post a Comment

Write Something about PK Music

new1

new2

new5