Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅಂಬೇಡ್ಕರರ ಜೀವನ ಕಥೆಯ saahitya Ambedkara jeevana kateya kannada lyrics

ಅಂಬೇಡ್ಕರರ ಜೀವನ ಕಥೆಯ ಭಾರತೀಯರೆ ನೀವ್ ಕೇಳಿ
ವಿಶ್ವ ಮಾನವನ ಸಾಹಸಗಾಥೆ ದೇಶಭಕ್ತರೆ ನೀವ್ ಕೇಳಿ
ಅಂಬೇಡ್ಕರರ ಜೀವನ ಕಥೆಯ ಭಾರತೀಯರೆ ನೀವ್ ಕೇಳಿ
ವಿಶ್ವ ಮಾನವನ ಸಾಹಸಗಾಥೆ ದೇಶಭಕ್ತರೆ ನೀವ್ ಕೇಳಿ
ನೊಂದ ಜನತೆಗೆ ದಾರಿ ತೋರಿದ
ಬೆಂದ ಬಾಳಿಗೆ ಬೆಳಕು ನೀಡಿದ   ||ಅಂಬೇಡ್ಕರರ||

ಮಹಾರಾಷ್ಟ್ರದ ಮಹೋ ಎಂಬುದು ಅಂಬೇಡ್ಕರರ ಜನ್ಮಸ್ಥಳ
ಏಪ್ರಿಲ್ ಅದಿನಾಲ್ಕನೆಯ ದಿನ ಬಾಬಾಸಾಹೇಬರ ಜನ್ಮದಿನ
ರಾಮಜಿ ಸಕ್ಪಾಲ್ ತಂದೆಯ ಹೆಸರು ಭೀಮಾಬಾಯಿ ತಾಯಿಯ ಹೆಸರು
ಸೂರ್ಯ ತೇಜದ ಬಾಲನ ಕರೆದರು ಭೀಮ ಎಂದು ಹೆಸರಿಟ್ಟು
ಬೆಳೆಯುವ ಪೈರು ಮೊಳಕೆಯಲ್ಲಿಯೆ ಪ್ರತಿಭೆಯ ಮೆರೆದನು ಬಾಲಕನು
ಬಡತನದಲ್ಲಿಯೇ ಬೆಂದು ಬಂದನು ಪುಟ ಬಂಗಾರವು ತಾನಾಗಿ
ನೊಂದ ಜನತೆಗೆ ದಾರಿ ತೋರಿದ
ಬೆಂದ ಬಾಳಿಗೆ ಬೆಳಕು ನೀಡಿದ   ||ಅಂಬೇಡ್ಕರರ||

ದನಗಳು ಕರುಗಳು ನೀರನು ಕುಡಿಯುವ ಭೂತಾಯಿಗೆ ಸೇರಿದ ಕೆರೆಯಲ್ಲಿ
ಭೀಮನು ನೀರನು ಕುಡಿಯಲು ಹೋದರೆ ಜಾತಿವಾದಿಗಳು ಬಿಡಲಿಲ್ಲ
ದೂರದ ಊರಿಗೆ ತಂದೆಯ ನೋಡಲು ಗಾಡಿಯ ಪಯಣದಿ ಹೋದಾಗ  
ಗಾಡಿ ಸವಾರನು ಜಾತಿಯ ತಿಳಿದು ಭೀಮನ ಭೂಮಿಗೆ ನೂಕಿದನು
ಅನ್ಯಾಯವ ಕೊನೆಗಾಣಿಸುವ ದಾರಿಯ ಭೀಮನು ಯೋಚಿಸಿದ
ದೇಶ ವಿದೇಶದಿ ಪದವಿಯ ಪಡೆದು ಹೊರಟವನು ರೂಪಿಸಿದ
ನೊಂದ ಜನತೆಗೆ ದಾರಿ ತೋರಿದ
ಬೆಂದ ಬಾಳಿಗೆ ಬೆಳಕು ನೀಡಿದ   ||ಅಂಬೇಡ್ಕರರ||

ಸಂವಿಧಾನವ ಬರೆದನು ಭೀಮ ಸ್ವತಂತ್ರ ಭಾರತ ಹೊಗಳಿರಲು
ಅಶ್ಪೃಶ್ಯತೆ ಯನು ತೊಡೆದನು ಭೀಮ ಮತಾಂಧರೆವೆಗಳು ನಡುಗಿರಲು
ಜಾತಿ ವಿನಾಶಕೆ ದಾರಿಯು ಎಂದು ಬೌದ್ದ ಧರ್ಮವ ಸೇರಿದನು
ನವಸಮಾಜವ ಕಟ್ಟುವ ಕನಸ ಜನಮನದಲ್ಲಿ ಬಿತ್ತಿದನು
ಐವತ್ತಾರನೆ ಡಿಸಂಬರ್ ಆರು ಬೆಳಕು ಆರಿತು ಭೂಮಿಯಲಿ
ದಲಿತ ಜನತೆಯು ತಬ್ಬಲಿಯಾಯಿತು ಬಾಬರ ಪರಿ ನಿರ್ವಾಣದಲಿ
ನೊಂದ ಜನತೆಗೆ ದಾರಿ ತೋರಿದ
ಬೆಂದ ಬಾಳಿಗೆ ಬೆಳಕು ನೀಡಿದ   ||ಅಂಬೇಡ್ಕರರ||

No comments:

Post a Comment

Write Something about PK Music

new1

new2

new5