Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

O nallane Savi mathonda Lyrics in kannada | ಓ ನಲ್ಲನೆ ಸವಿ ಮಾತೊಂದ ನುಡಿವೆಯಾ


ಚಿತ್ರ : ಸಹೋದರರ ಸವಾಲ್

 ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ
ಓ......................
ಆ ಆ ಆ ಆ ... ಆ ಆ ಆ

ಹಾಲು ಜೇನು ಕಲೆತಂತೆ
ಮನಸು ಮನಸು ಕಲೆತಾಯ್ತು
ಬದುಕಲ್ಲಿ ಹರುಷ ತುಂಬಿತು
ನದಿಗಳೆರಡು ಬೆರೆತಂತೆ
ಹೃದಯವೆರಡು ಬೆರೆತಾಯ್ತು
ನೀ ಬಂದು ಬಾಳು ಬೆಳಗಿತು
ನಾವೆಂದೆಂದೂ ಹೀಗೊಂದಾಗಿ
ಇರುವಾಸೆ ತಂದಿತು
 ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ

♬♬♬♬♬♬♬♬♬♬♬♬♬♬♬♬♬♬♬♬♬♬♬♬
ಪ್ರೇಮ ಜ್ಯೋತಿ ಬೆಳಗುತಿದೆ
ಇರುಳ ನುಂಗಿ ಬೆಳೆಯುತಿದೆ
ಬಾಳಿಗೆ ತಂತೂ ಹರುಷವ
ಆರದಂತೆ ಜ್ಯೋತಿಯನು
ಕಾವಲಿರಿಸಿ ಕಂಗಳನು
ಬಾಳನ್ನೇ ಧಾರೆ ಎರೆಯುವಾ
ನಾವೆಂದಂದೂ ಹೀಗೊಂದಾಗಿ
ಆನಂದ ಹೊಂದುವಾ
 ಅರಗಣಿ ಸವಿ ಮಾತೊಂದ ನುಡಿವೆಯಾ..
ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ
ನಾ ನಿನ್ನ ಬಿಡೆನೂ ಎಂದಿಗೂ

No comments:

Post a Comment

Write Something about PK Music

new1

new2

new5