Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Saalutillave Saaluthillave Lyrics in Kannada | ಸಾಲುತಿಲ್ಲವೇ ಸಾಲುತಿಲ್ಲವೇ | ಚಿತ್ರ : ಕೋಟಿಗೊಬ್ಬ-2


ಚಿತ್ರ : ಕೋಟಿಗೊಬ್ಬ-2

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಒಂದೇ ಸಮನೆ ನಿನ್ನ ನಾ ನೋಡುತಿದ್ದ ಮೇಲೂ
ತುಂಬಾ ಸಲುಗೆಯಿಂದ  ಬೆರೆತು ಹೋದ ಮೇಲೂ
ಪಕ್ಕದಲ್ಲಿ ಕುಳಿತುಕೊಂಡು
ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸೆದ ಮೇಲೂ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
♬♬♬♬♬♬♬♬♬♬♬♬♬♬♬♬

ಮುಂಜಾನೆ ನನ್ನ ಪಾಲಿಗಂತೂ ಸಾಲೊಲ್ಲ
ಮುಸ್ಸಂಜೆ ತನಕ ಸನಿಹವಂತು ಸಾಲೊಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೇ ಸಾಲೋದಿಲ್ಲ
ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಲೋದಿಲ್ಲ
ಋತುಗಳೆಲ್ಲ ತಿರುಗಿ ಹೋಗಿ
ಸಮಯ ಹಿಂದೆ ಸರಿದು ಹೋಗಿ
ಮೊದಲ ಭೇಟಿ ನಡೆದ ಮೇಲೂ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ
♬♬♬♬♬♬♬♬♬♬♬♬♬♬♬
ನಿಸರ್ಗ ಹೇಳುತಿರುವ ಶಕುನ ಸಾಲೊಲ್ಲ
ಸಲ್ಲಾಪದಲ್ಲೂ ಇರುವ ಸುಖವು ಸಾಲೊಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವು ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಗೊಲ್ಲ
ಏಳು ಸ್ವರವು ಮುಗಿದ ಮೇಲೂ
ಕಾಡುವಂತ ನನ್ನ ನಿನ್ನ
ಯುಗಳ ಗೀತೆ ಮುಗಿಯೋದಿಲ್ಲ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ

ಶ್ವಾಶದಲ್ಲಿ ನೀನು ವಾಸವಿದ್ಧ ಮೇಲೂ
ನನ್ನ ಹೃದಯವನ್ನು ಹಾಯಾಗಿ ಕದ್ಧ ಮೇಲೂ
ಎರಡು ಹೃದಯ ಬೆರೆತ ಮೇಲೂ
ಹಾಡು ಮುಗಿದು ಹೋದ ಮೇಲೂ
ಮೌನ ತುಂಬಿ ಬಂದ ಮೇಲೂ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

No comments:

Post a Comment

Write Something about PK Music

new1

new2

new5