ಚಿತ್ರ: ಭಕ್ತ ಕುಂಬಾರ
ಕಂಡೆ ಹರಿಯ ಕಂಡೆ
ದೇವಾದಿ ದೇವ
ಧನುಜಾದಿ ವಂದ್ಯ ದರಣೀಶನ
ದಿವ್ಯ ಚರಣ ಕಮಲ ಯುಗವ
ಕಂಡೆ ಹರಿಯ ಕಂಡೆ
ಪಾವನವಾಯಿತು ಕುಲಕೋಟಿಗಳು
ಪುಟಿದು ಹೋದವು ಪರಿತಾಪಗಳು…..
ಆ ಆ ಆ ಆ ಆ ಆ ಆ ಆ ಆ
ಪುಟಿದು ಹೋದವು ಪರಿತಾಪಗಳು
ಬೇರೇನೂ ಬೇಕಿಲ್ಲ ಸಾಕು
ಇದುವೇ ಅನಂತ ಭಾಗ್ಯ
ಕಂಡೆ ಹರಿಯ ಕಂಡೆ
ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಒಳಗೂ ಹೊರಗೂ ಬೆಳಗುವ ಹಾಗೆ
ಸಖಿಯರ ಒಡನೆ ಕುಣಿಯುವ ಹರಿಯ
ಚರಣ ಕಿಂಕಿಣೀ ನಾದದ ಇಂಪು
ರಾಗ ಭಾವಗಳು ಬೆಸೆದಿಹ ಸೊಂಪು
ಮಂದಹಾಸದಲಿ ನಿಂದ ಲಾಸ್ಯದಲಿ
ಕುಣಿದು ಕುಣಿಸೊ ಕಲಾಪವನ್ನೇ
ಕಂಡೆ ಹರಿಯ ಕಂಡೆ
ಅಸಮಾನ ಕಲೆಗಾರ ಇವ ನಮ್ಮ ವಿಟಲ
ರಸವಂತ ಗುಣವಂತ ಶೃಂಗಾರ ಲೋಲ
ಯೋಗಿಯೋ ಭೋಗಿಯೋ ಬಲವರಿಲ್ಲ
ರಸಿಕ ರಂಗನ ಅನಂಗಪಿತನ
ಹಾವ ಭಾವಗಳ ಒಳಗಿನ ಮರ್ಮ
ತಿಳಿದು ನಾನಿಂದು ತಳೆದೆ ಆನಂದ
ಪ್ರಾಣವ ಬೆರೆತ ವಿಹಾರವನ್ನೇ
ಕಂಡೆ ಹರಿಯ ಕಂಡೆ
ದೇವಾದಿ ದೇವ
ಧನುಜಾದಿ ವಂದ್ಯ ದರಣೀಶನ
ದಿವ್ಯ ಚರಣ ಕಮಲ ಯುಗವ
ಕಂಡೆ ಹರಿಯ ಕಂಡೆ
No comments:
Post a Comment
Write Something about PK Music