Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

KGF REVIEW



ಕೆ ಜಿ ಎಫ್ ಚಿತ್ರ ಬಿಡುಗಡೆ ಆಗುತ್ತೋ ಇಲ್ವೋ ಅನ್ನೋ ಗಲಿಬಿಲಿಯಲ್ಲಿದ್ದ ಅಭಿಮಾನಿಗಳಿಗೆ ಚಿತ್ರ ಬಿಡುಗಡೆ ಆಗಿದ್ದೆ ಖುಷಿ, ಬೆಳಿಗ್ಗೆ ಗಂಟೆಗೆ ಬಿಡುಗಡೆಯಾದ ಚಿತ್ರವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಚಿತ್ರವನ್ನು ನೋಡಿದ ಪ್ರೇಕ್ಷಕರು ಚಿತ್ರ ಸೂಪರ್ ಅಂತ ಹೇಳ್ತಿದ್ದಾರೆ, ನಮ್ಮ ಚಂದನವನ ದಲ್ಲಿ ಹಿಂದೆಂದೂ ಕಂಡರಿಯದ ಚಿತ್ರ ಇದಾಗಿದ್ದು, ಇಡೀ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ, ಚಿತ್ರವನ್ನು ನೋಡಿದ ಪ್ರೇಕ್ಷಕರು ಬಾಹುಬಲಿ ಚಿತ್ರವನ್ನು ಹಿಂದಿಕ್ಕಿ ರೆಕಾರ್ಡ್ ಮಾಡುವ ಸಾದ್ಯತೆ ಇದೆ ಎಂದು ಹೇಳುತ್ತಿದ್ದಾರೆ, ನಮ್ಮ ಕನ್ನಡ ಇಂಡಸ್ರ್ಟಿ ಹೆಮ್ಮೆ ಪಡುವ ವಿಚಾರ ಇದಾಗಿದ್ದು, ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎಂಬ ಯೋಚನೆಯಲ್ಲಿ ತೊಡಗಿದ್ದಾರೆ.

ಯಶ್ ರವರ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಚಿತ್ರಕ್ಕೆ ಕೆಲವು ದಿನಗಳು ಟಿಕೆಟ್ ಸಿಗದೆ ಒದ್ದಾಡಿದ ಅಭಿಮಾನಿಗಳಿಗೆ ಚಿತ್ರದಲ್ಲೂ ಟಿಕೆಟ್ ಗಾಗಿ ಪರದಾಡುವ ಸ್ಥಿತಿ ಬಂದಿದೆ ಅಂದರೆ ನಿಜವಾಗಲೂ ರೋಮಾಂಚನೀಯ, ಇದು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ,

ಚಿತ್ರಕ್ಕೆ ಸ್ಟಾರ್ ಗೆ ಸ್ಟಾರ್ ಕೊಡುವಷ್ಟು ಚಿತ್ರ ಚನ್ನಾಗಿದೆ ಅಂತ ಸಿನಿಮಾ ನೋಡಿದ ಪ್ರೇಕ್ಷಕರು ಹೇಳುತ್ತಿರುವುದು ಸಿನಿಮಾ ತಂಡದವರಿಗೆ ಖುಷಿ ಕೊಡುವ ವಿಚಾರ, ಸಿನಿಮಾ ಕುಖ್ಯಾತ ರೌಡಿ ತಂಗಂ ಜೀವನಾದರಿತ ಚಿತ್ರ ಎಂದು ವೆಂಕಟೇಶ್ ರವರು ಕೋರ್ಟ್ ಮೊರೆ ಹೋಗಿದ್ದರು, ಆದರೆ ಸಿನಿಮಾ ಬಿಡುಗಡೆ ಯಾದ ನಂತರ ಇದು ಯಾವುದೇ ವ್ಯಕ್ತಿಗೆ ಸಂಬಂಧ ಪಟ್ಟ ಕಥೆ ಅಲ್ಲ ಎಂಬುದು ತಿಳಿದು ಬಂದಿದೆ.

No comments:

Post a Comment

Write Something about PK Music

new1

new2

new5