Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Yaava Kannu Heege Nodalilla Lyrics - C Ashwath Songs Lyrics - ಯಾವ ಕಣ್ಣು ಹೀಗೆ ನೋಡಲಿಲ್ಲ

Song: Yaava Kannu Heege Nodalilla
Music/Singer: C. Ashwath

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನ ಯಾವ ಕಣ್ಣು ಹೀಗೆ ನೋಡಲಿಲ್ಲ
ಕುಡಿನೋಟದಲ್ಲೇ ನಿನ್ನಂತೆ ನಲ್ಲೆ
ಕುಡಿನೋಟದಲ್ಲೇ ನಿನ್ನಂತೆ ನಲ್ಲೆ
ಯಾವ ಹೆಣ್ಣು ನನ್ನ ಕಾಡಲಿಲ್ಲ
ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನ ಯಾವ ಕಣ್ಣು ಹೀಗೆ ನೋಡಲಿಲ್ಲ

ಒಮ್ಮೆ ಮೋಹಕ ನೋಟ ಹಾಯಿಸಿ
ಇನ್ನೊಮ್ಮೆ ನೋಡದೆ ನೋಯಿಸಿ
ಒಮ್ಮೆ ಮೋಹಕ ನೋಟ ಹಾಯಿಸಿ
ಇನ್ನೊಮ್ಮೆ ನೋಡದೆ ನೋಯಿಸಿ
ಕನಸಲ್ಲೂ ಬಿಡದೆ ಸತಾಯಿಸಿ
ಕನಸಲ್ಲೂ ಬಿಡದೆ ಸತಾಯಿಸಿ
ಕಣ್ಣ ಮುಚ್ಚಾಲೆಯನು ಮಾಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನ ಯಾವ ಕಣ್ಣು ಹೀಗೆ ನೋಡಲಿಲ್ಲ

ಏನೇನೋ ಸನ್ನೆಯ ಮಾಡಿ
ಬಳಿ ಬಂದು ದೂರಕ್ಕೆ ಓಡಿ
ಏನೇನೋ ಸನ್ನೆಯ ಮಾಡಿ
ಬಳಿ ಬಂದು ದೂರಕ್ಕೆ ಓಡಿ
ತಬ್ಬಿಬ್ಬಿನಲಿ ನನ್ನ ದೂಡಿ
ತಬ್ಬಿಬ್ಬಿನಲಿ ನನ್ನ ದೂಡಿ
ಕ್ಷಣಕ್ಕೊಂದು ಆಸ್ತ್ರವ ಹೂಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನ ಯಾವ ಕಣ್ಣು ಹೀಗೆ ನೋಡಲಿಲ್ಲ

ಹೃದಯದ ತಂತಿಯ ಮಿಡಿದು
ಪ್ರೀತಿಯ ಶೃತಿಯನ್ನು ಹಿಡಿದು
ಹೃದಯದ ತಂತಿಯ ಮಿಡಿದು
ಪ್ರೀತಿಯ ಶೃತಿಯನ್ನು ಹಿಡಿದು
ತನ್ನ ಗುಟ್ಟನು ತಾನೇ ಒಡೆದು
ತನ್ನ ಗುಟ್ಟನು ತಾನೇ ಒಡೆದು
ಅನುರಾಗ ಗೀತೆಯ ಹಾಡಲಿಲ್ಲ
ಅನುರಾಗ ಗೀತೆಯ ಹಾಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನ ಯಾವ ಕಣ್ಣು ಹೀಗೆ ನೋಡಲಿಲ್ಲ
ಕುಡಿನೋಟದಲ್ಲೇ ನಿನ್ನಂತೆ ನಲ್ಲೆ
ಕುಡಿನೋಟದಲ್ಲೇ ನಿನ್ನಂತೆ ನಲ್ಲೆ
ಯಾವ ಹೆಣ್ಣು ನನ್ನ ಕಾಡಲಿಲ್ಲ
ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನ ಯಾವ ಕಣ್ಣು ಹೀಗೆ ನೋಡಲಿಲ್ಲ

No comments:

Post a Comment

Write Something about PK Music

new1

new2

new5