Song: Bannisale henne
Lyrics: B.R Lakshman Rao
Music/Singer: C Ashwath
Lyrics: B.R Lakshman Rao
Music/Singer: C Ashwath
ಬಣ್ಣಿಸಲೇ ಹೆಣ್ಣೇ, ಏನು ಬಣ್ಣಿಸಲೇ ಹೆಣ್ಣೇ…
ನಿನ್ನ ಮಹಿಮೆಯನು ಏನೆಂದು ಬಣ್ಣಿಸಲೇ…
ಬಣ್ಣಿಸಲೇ ಹೆಣ್ಣೇ, ಏನು ಬಣ್ಣಿಸಲೇ ಹೆಣ್ಣೇ…
ನಿನ್ನ ಮಹಿಮೆಯನು ಏನೆಂದು ಬಣ್ಣಿಸಲೇ…
ಗೋಲು ಹೊಡೆದಂತೆ ಮರಡೊನ ತಪ್ಪಿಸಿ ಎಲ್ಲರನು
ಮಿಂಚು ನೋಟದಲ್ಲೆ.. ನನ್ನೆದೆಯ ಹೊಕ್ಕೆಯಲ್ಲೆ
ಕಪಿಲನ ಸಿಕ್ಸರಿನಂತೆ ನಮ್ಮ ಪ್ರೇಮ ಕೂಡ
ದಾಟಿ ಹಾರಿತಲ್ಲೆ ಜಗದ ಎಲ್ಲ ಎಲ್ಲೆ
ಬಣ್ಣಿಸಲೇ ಹೆಣ್ಣೇ, ಏನು ಬಣ್ಣಿಸಲೇ ಹೆಣ್ಣೇ…
ನಿನ್ನ ಮಹಿಮೆಯನು ಏನೆಂದು ಬಣ್ಣಿಸಲೇ…
ಸೋತಳು ನಿನಗೆ ಪಿ.ಟಿ ಉಷಾ ಅಡೆ ತಡೆಗಳ ದಾಟಿ
ಓಡುವ ವೇಗದಲಿ ನನ್ನ ಕೂಡುವ ತವಕದಲಿ
ಮೀರಿದೆ ನಾನು ಗವಾಸ್ಕರನ ನೂರುಗಳ ದಾಖಲೆ
ನಿನಗಿತ್ತ ಮುತ್ತಿನಲ್ಲಿ ಪಡೆದ ಸಿರಿ ಸಂಪತ್ತಿನಲಿ
ಬಣ್ಣಿಸಲೇ ಹೆಣ್ಣೇ, ಏನು ಬಣ್ಣಿಸಲೇ ಹೆಣ್ಣೇ…
ನಿನ್ನ ಮಹಿಮೆಯನು ಏನೆಂದು ಬಣ್ಣಿಸಲೇ…
ಎಲ್ಲ ಆಟಗಳೂ ತೀರಿದವು ಈಗ ಕಣ್ಣಾಮುಚ್ಚಾಲೆ
ಎಲ್ಲ ಆಟಗಳೂ ತೀರಿದವು ಈಗ ಕಣ್ಣಾಮುಚ್ಚಾಲೆ
ಎಲ್ಲಡಗಿದೆ ನಲ್ಲೆ ಇನ್ಯಾರ ತೆಕ್ಕೆಯಲ್ಲೆ
ಎಲ್ಲಡಗಿದೆ ನಲ್ಲೆ ಇನ್ಯಾರ ತೆಕ್ಕೆಯಲ್ಲೆ
ಉಳಿಸಿ ಹೋದೆಯಾ ನನಗೆ ಮುಗಿಯದ ಹುಡುಕಾಟ
ಒಲವೇ ನೀನೆಲ್ಲಿ ಇನ್ಯಾವ ಹೆಣ್ಣಿನಲ್ಲಿ
ಒಲವೇ ನೀನೆಲ್ಲಿ ಇನ್ಯಾವ ಹೆಣ್ಣಿನಲ್ಲಿ
No comments:
Post a Comment
Write Something about PK Music