Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Ninna preetige adara reetige Lyrics - C Ashwath Songs Lyrics - ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ

Music/Singer: C Ashwath

ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ
ಹೊನ್ನ ಚಂದಿರ ನೀಲಿ ತಾರೆಗೆ ಹೊಂದಲಾರದ ಹೋಲಿಕೆ
ನಿನ್ನ ಪ್ರೀತಿಗೆ ಅದರ ರೀತಿಗೆ ಚೆಲುವು ಕನಸಿನ ಜವನಿಕೆ
ಬೆಳ್ಳಿ ನಿದ್ದೆಯ ತುಟಿಗಳಂಚಿಗೆ ಸುಳಿದ ಕಿರುನಗೆ ತೋರಿಕೆ
ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ
ಹೊನ್ನ ಚಂದಿರ ನೀಲಿ ತಾರೆಗೆ ಹೊಂದಲಾರದ ಹೋಲಿಕೆ

ತುಂಬಿ ಕೊರೆದಿಹ ಹೂವಿನೆದೆಯಲಿ ನೋವು ಗಾಳಿಗೆ ಹಾಸಿಗೆ
ಜೇನು ಜೀವದ ನೆಳಲ ಪೊದೆಯಲಿ ಗೂಡು ಕಟ್ಟಿದೆ ಆಸೆಗೆ
ತುಂಬಿ ಕೊರೆದಿಹ ಹೂವಿನೆದೆಯಲಿ ನೋವು ಗಾಳಿಗೆ ಹಾಸಿಗೆ
ಜೇನು ಜೀವದ ನೆಳಲ ಪೊದೆಯಲಿ ಗೂಡು ಕಟ್ಟಿದೆ ಆಸೆಗೆ
ತಂತಿಯಾಚೆಗೆ ವೀಣೆ ಮಿಂಚಿದೆ ಬೆಂಕಿಬೆರಳಿನ ಹಾಡಿಗೆ
ತಂತಿಯಾಚೆಗೆ ವೀಣೆ ಮಿಂಚಿದೆ ಬೆಂಕಿಬೆರಳಿನ ಹಾಡಿಗೆ
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ ಚಿಂತೆಯಾಳುವ ಕಾಡಿಗೆ

ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ
ಹೊನ್ನ ಚಂದಿರ ನೀಲಿ ತಾರೆಗೆ ಹೊಂದಲಾರದ ಹೋಲಿಕೆ

ನಗುವ ಮುಖಗಳ ನೋಡಿ ಬಂದೆನು ಹಾದಿ ಬೀದಿಯ ಕೆಲದಲಿ
ನಗದ ಒಂದೇ ಮುಖವ ಕಂಡೆನು ನನ್ನ ಮನೆಯಂಗಳದಲಿ
ನಗುವ ಮುಖಗಳ ನೋಡಿ ಬಂದೆನು ಹಾದಿ ಬೀದಿಯ ಕೆಲದಲಿ
ನಗದ ಒಂದೇ ಮುಖವ ಕಂಡೆನು ನನ್ನ ಮನೆಯಂಗಳದಲಿ
ನಗದ ಮುಖದಲಿ ನಿನ್ನ ಕಂಡೆನು ತಿಳಿದ ಬಾನಿನ ಹರಹನು
ನಗದ ಮುಖದಲಿ ನಿನ್ನ ಕಂಡೆನು ತಿಳಿದ ಬಾನಿನ ಹರಹನು
ಮೊದಲ ಮೋಹದ ಮಂಜು ಕದಲಲು ಬದುಕು ತುಂಬಿದ ಹಗಲನು

ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ
ಹೊನ್ನ ಚಂದಿರ ನೀಲಿ ತಾರೆಗೆ ಹೊಂದಲಾರದ ಹೋಲಿಕೆ
ನಿನ್ನ ಪ್ರೀತಿಗೆ ಅದರ ರೀತಿಗೆ ನೀಡಬಲ್ಲೆನೆ ಕಾಣಿಕೆ
ಕಾಲವಳಿಸದ ನೆಲದ ಚೆಲುವಿಗೆ ನಿನ್ನ ಪ್ರೀತಿಯೆ ಹೋಲಿಕೆ

No comments:

Post a Comment

Write Something about PK Music

new1

new2

new5