Song: Subba bhattara magale
Lyrics: B R Lakshman Rao
Music/Singer: C Ashwath
Lyrics: B R Lakshman Rao
Music/Singer: C Ashwath
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ನೀಲಿ ನೈಲೆಕ್ಸಿನ ಮೇಘವಿನ್ಯಾಸದ ಆಕಾಶದ ಸೀರೆ
ದಿಗಂತಗಳೇ ಮೇರೆ
ನೀಲಿ ನೈಲೆಕ್ಸಿನ ಮೇಘವಿನ್ಯಾಸದ ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆಯೆಲ್ಲಿ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿ ಜಿಗಿ ಒಡವೆ ದುಕಾನು ಆರಿಸಿಕೋ ಬೇಕೇನು
ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿ ಜಿಗಿ ಒಡವೆ ದುಕಾನು ಆರಿಸಿಕೋ ಬೇಕೇನು
ಚಿಕ್ಕೆ ಮೂಗುತಿ ಚಂದ್ರ ಪದಕಕ್ಕೆ
ನೀಹಾರಿಕೆ ಹಾರ ನನ್ನ ಸಂಪತ್ತೆಷ್ಟು ಅಪಾರ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು
ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ ಸಪ್ತವರ್ಣದ ಕಮಾನು
ನಿನಗೇ ಹೌದು..
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಪಾತರಗಿತ್ತಿಯ ಪಕ್ಕವನೇರಿ ಧೂಪಡ ಕಾನಿಗೆ ಹಾರಿ
ಪ್ರಾಯದ ಮಧು ಹೀರಿ
ಪಾತರಗಿತ್ತಿಯ ಪಕ್ಕವನೇರಿ ಧೂಪಡ ಕಾನಿಗೆ ಹಾರಿ
ಪ್ರಾಯದ ಮಧು ಹೀರಿ
ಜುಳು ಜುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳುಮುಳುಗಿ ನಿನ್ನ ಹೊಸತನದಲಿ ಬೆಳಗಿ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
ಸುಬ್ಬಭಟ್ಟರ ಮಗಳೇ ಇದೆಲ್ಲ ನಂದೇ ತಗೊಳ್ಳೆ
No comments:
Post a Comment
Write Something about PK Music