ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಅನುಗ್ರಹಗೈದ ಭೂಮಿ ಇದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಅನುಗ್ರಹಗೈದ ಭೂಮಿ ಇದು
ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು
ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಗಂಡರ ಗಂಡ ವೀರ ಪ್ರಚಂಡ
ಕೃಷ್ಣ ದೇವರಾಯ ಆಳಿದ ವೈಭವದೆ
ಗಂಡರ ಗಂಡ ವೀರ ಪ್ರಚಂಡ
ಕೃಷ್ಣ ದೇವರಾಯ ಆಳಿದ ವೈಭವದೆ
ಕಲಿಗಳ ನಾಡು ಕವಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ
ಕನ್ನಡ ಬಾವುಟ ಹಾರಿಸಿದ
ಮಧುರೆ ವರೆಗೂ ರಾಜ್ಯವ ಹರಡಿಸಿದ
ಕರ್ನಾಟಕದ ಇತಿಹಾಸದಲಿ
ಸಂಗೀತ ನಾಟ್ಯಗಳ ಸಂಗಮವಿಲ್ಲೆ
ಶಿಲ್ಪ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೆ
ಶಿಲ್ಪ ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೆ
ಯತಿಗಳ ದಾಸರ ನೆಲೆನಾಡಿಲ್ಲೆ
ಪಾವನ ಮಣ್ಣಿದು ಹಂಪಿಯದು
ಯುಗ ಯುಗ ಅಳಿಯದ ಕೀರ್ತಿ ಇದು
ಕನ್ನಡ ಭೂಮಿ ಕನ್ನಡ ನುಡಿಯು
ಕನ್ನಡ ಪ್ರೀತಿ ಎಂದೆಂದೂ ಬಾಳೈ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ
No comments:
Post a Comment
Write Something about PK Music