ನಾದವೇ ನನ್ನಿಂದ ದೂರಾದೆಯ..
ಜೀವವೇ ಒಡಲಿಂದ ಬೇರಾದೆಯ
ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ
ವೇದನೆ ರಾಗವ ವಿರಹದ ಲಯದಲಿ ಹೃದಯದಿ ಮೀಟಿದೆಯಾ..
ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ
ಗೆಜ್ಜೆಗಳು ಕುಣಿದಾಗ ಮೂಜಗವು ಮರೆತಾಗ
ಹೊಮ್ಮಿರಲು ಅನುರಾಗ ಸುಖ ಕಂಡೆನು
ನಿನ್ನ ನಗು ಮರೆಯಾಗೆ ವೇಣುವಿದು ಮೂಕಾಗೆ
ಕಂಬನಿ ಹೊಳೆಯಲ್ಲಿ ನಾ ಮಿಂದೆನು
ದೈವವದು ಇರದಂಥ ಗುಡಿಯಾದೆನಾ
ರಸಹೀನ ಇಂದಾಯ್ತು ಈ ಜೀವನ
ವೇದನೆ ರಾಗವ ವಿರಹದ ಲಯದಲಿ ಹೃದಯದಿ ಮೀಟಿದೆಯಾ
ನಾದವೇ ನನ್ನಿಂದ ದೂರದೆಯ
ಜೀವವೇ ಒಡಲಿಂದ ಬೇರಡೆಯ
ಕನಸುಗಳು ಕಲೆತಾಗ, ಮನಸುಗಳು ಬೆರೆತಾಗ
ಪ್ರೇಮವೆನ್ನೋ ಅಲೆಯಲ್ಲಿ ನಾ ತೇಲಿದೆ
ಜನ್ಮಗಳ ಬಂಧನವೋ ಈ ನನ್ನ ತಪ ಫಲವೋ
ಆತ್ಮಗಳ ಸಮ್ಮಿಲನ ಸವಿ ನೋಡಿದೆ
ನಿನ್ನೊಲವ ಬೆಳಕಲ್ಲಿ ನಡೆದಾಡಿದೆ
ನೊಂದಿರುವೆ ಇರುಳಲ್ಲಿ ಗುರಿ ಕಾಣದೆ
ದೇಹಕೆ ಪ್ರಾಣವು ಆಯಿತೇ ಭಾರವು ಅಂತ್ಯವ ತೋರಿಸೆಯ..
ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ
ವೇದನೆ ರಾಗವ ವಿರಹದ ಲಯದಲಿ ಹೃದಯದಿ ಮೀಟಿದೆಯಾ
ನಾದವೇ.. ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ
No comments:
Post a Comment
Write Something about PK Music