ತನ್ನ ತಾನು
ತಿಳಿದ ಮೇಲೆ
Music : Siddaiah Swami Javali
Lyrics : Chandramappa Mastar
Singers : Maruthi Kasara,
Narona Suvarna, Lakshmi,
Shruthi, Chaya, Nanditha
ನಾ ಬರಬಾರದಿತ್ತು
ಈ ಊರಿಗ
ನಾ ಬರಬಾರದಿತ್ತು
ಈ ಊರಿಗ
ಬಂದು ಬಿದ್ದೇನೊ
ಮಾಯದ ಬಲೆಯೊಳಗ
ಬಂದು ಬಿದ್ದೇನೊ
ಮಾಯದ ಬಲೆಯೊಳಗ
ಹೇಸಿಕಿ ಮಲ
ಮೂತ್ರದ ಒಳಗ
ಹೇಸಿಕಿ ಮಲ
ಮೂತ್ರದ ಒಳಗ
ನಾ ಬರಬಾರದಿತ್ತು
ಈ ಊರಿಗ
♫♫♫♫♫♫♫♫♫♫♫♫
ಒಂಬತ್ತು
ಬಾಗಿಲ ಊರೊಳಗ
ನಾ ಹೇಗೆ
ದಾಟಲಿ ಇದರೊಳಗ
ಒಂಬತ್ತು
ಬಾಗಿಲ ಊರೊಳಗ
ನಾ ಹೇಗೆ
ದಾಟಲಿ ಇದರೊಳಗ
ಎಂಟು ಮಂದಿ
ಕಳ್ಳರ
ಭಯ ಅದ ಎನಗ
ಎಂಟು ಮಂದಿ
ಕಳ್ಳರ
ಭಯ ಅದ ಎನಗ
ಬೇಸರಾಯಿತಲ್ಲ
ಈ ಊರೆನಗ
ಬೇಸರಾಯಿತಲ್ಲ
ಈ ಊರೆನಗ
ನಾ ಬರಬಾರದಿತ್ತು
ಈ ಊರಿಗ
ನಾ ಬರಬಾರದಿತ್ತು
ಈ ಊರಿಗ
♫♫♫♫♫♫♫♫♫♫♫♫
ಮೂವರ ಸಿಟ್ಟು
ಅದ ಎನ್ನ ಮ್ಯಾಗ
ಐದು ಮಂದಿ
ಪೈರಕರು ಹಾರೆನಗ
ಮೂವರ ಸಿಟ್ಟು
ಅದ ಎನ್ನ ಮ್ಯಾಗ
ಐದು ಮಂದಿ
ಪೈರಕರು ಹಾರೆನಗ
ಇಷ್ಟು ಎಲ್ಲಾ
ತಪ್ಪಿಸಿ ಹೋದದರೊಳಗ
ಇಷ್ಟು ಎಲ್ಲಾ
ತಪ್ಪಿಸಿ ಹೋದದರೊಳಗ
ಇದಿ ಮಾಯಿಗಂಟಬಿತ್ತು
ಹಾದ್ಯಾಗ
ಇದಿ ಮಾಯಿಗಂಟಬಿತ್ತು
ಹಾದ್ಯಾಗ
ನಾ ಬರಬಾರದಿತ್ತು
ಈ ಊರಿಗ
ನಾ ಬರಬಾರದಿತ್ತು
ಈ ಊರಿಗ
♫♫♫♫♫♫♫♫♫♫♫♫
ಕಾಳಗ ಕತ್ತಲ
ಇದ್ದು ಎನಗ
ಎತ್ತ ನೋಡಿದರತ್ತ
ಮುಳ್ಳ ಹಾದ್ಯಾಗ
ಕಾಳಗ ಕತ್ತಲ
ಇದ್ದು ಎನಗ
ಎತ್ತ ನೋಡಿದರತ್ತ
ಮುಳ್ಳ ಹಾದ್ಯಾಗ
ಯಮನಾರು ಕುಂತರ
ಬಾಗಿಲದೊಳಗ
ಯಮನಾರು ಕುಂತರ
ಬಾಗಿಲದೊಳಗ
ಜಕ್ಕಿ ಜೋಲಿ
ಹೊಡೆಯುತ್ತರ
ಅವರೆನಗ
ಜಕ್ಕಿ ಜೋಲಿ
ಹೊಡೆಯುತ್ತರ
ಅವರೆನಗ
ನಾ ಬರಬಾರದಿತ್ತು
ಈ ಊರಿಗ
ನಾ ಬರಬಾರದಿತ್ತು
ಈ ಊರಿಗ
♫♫♫♫♫♫♫♫♫♫♫♫
ದೇಶದೊಳು
ಚಿನಮಗೆರಿ
ಗುಡ್ಡದೊಳಗ
ಅಲ್ಲಿ ಇರುವ
ಮಹಂತಯೋಗಿ
ಮಠದೊಳಗ
ದೇಶದೊಳು
ಚಿನಮಗೆರಿ
ಗುಡ್ಡದೊಳಗ
ಅಲ್ಲಿ ಇರುವ
ಮಹಂತಯೋಗಿ
ಮಠದೊಳಗ
ಭಕ್ತಿಯಿಂದೇ
ಪೂಜಿಸು ನೀ ಆತನಿಗ
ಭಕ್ತಿಯಿಂದೇ
ಪೂಜಿಸು ನೀ ಆತನಿಗ
ಮುಕ್ತಿ ಬೇಡಿಕೋರೊ
ಗುರು ಮಾಂತನಿಗ
ಮುಕ್ತಿ ಬೇಡಿಕೋರೊ
ಗುರು ಮಾಂತನಿಗ
ನಾ ಬರಬಾರದಿತ್ತು
ಈ ಊರಿಗ
ನಾ ಬರಬಾರದಿತ್ತು
ಈ ಊರಿಗ
ಬಂದು ಬಿದ್ದೇನೊ
ಮಾಯದ ಬಲೆಯೊಳಗ
ಬಂದು ಬಿದ್ದೇನೊ
ಮಾಯದ ಬಲೆಯೊಳಗ
ಹೇಸಿಕಿ ಮಲ
ಮೂತ್ರದ ಒಳಗ
ಹೇಸಿಕಿ ಮಲ
ಮೂತ್ರದ ಒಳಗ
ನಾ ಬರಬಾರದಿತ್ತು
ಈ ಊರಿಗ
ನಾ ಬರಬಾರದಿತ್ತು
ಈ ಊರಿಗ
ನಾ ಬರಬಾರದಿತ್ತು
ಈ ಊರಿಗ
No comments:
Post a Comment
Write Something about PK Music