Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಶ್ರೀ ಶಿವಾಚಾರ್ಯರಿಗೆ ವಂದನೆ - Shree Shivachararige Vandane Song Lyrics in Kannada

ಶ್ರೀ ರಂಭಾಪುರೀಶ್ವರ ಭಕ್ತಿ ಗೀತೆಗಳು

ಸಂಗೀತ : ದೇವೇಂದ್ರ ಕುಮಾರ್

ಸಾಹಿತ್ಯ: ಗುರುಸ್ವಾಮಿ ಕಲಕೆರಿ

ಗಾಯಕರು : ವೀರೇಶ್ ಕಿತ್ತೂರ್


ಶ್ರೀ ಶಿವಾಚಾರ್ಯರಿಗೆ ವಂದನೆ

ಜಗದಾಚಾರ್ಯರಿಗೆ ಅಭಿನಂದನೆ

ಶ್ರೀ ಶಿವಾಚಾರ್ಯರಿಗೆ ವಂದನೆ

ವಂದನೆ

ಜಗದಾಚಾರ್ಯರಿಗೆ ಅಭಿನಂದನೆ

ಅಭಿನಂದನೆ

ಪಂಚ ಪೀಠಾಧೀಶ

ಜಗದ್ಗುರುಗಳೈವರಿಗೆ

ಶಿರ ಸಾಷ್ಟಾಂಗ ಪ್ರಣಾಮದರ್ಪಣೆ

ಪ್ರಣಾಮದರ್ಪಣೆ

ಶ್ರೀ ಶಿವಾಚಾರ್ಯರಿಗೆ ವಂದನೆ

ವಂದನೆ

ಜಗದಾಚಾರ್ಯರಿಗೆ ಅಭಿನಂದನೆ

ಅಭಿನಂದನೆ

♫♫♫♫♫♫♫♫♫♫♫♫

ಹಿರಿದರಲ್ಲಿ ಹಿರಿತನವ ಕಾಣುವಾ

ಕಾಣುವಾ

ಅರಿಯದನ್ನು ಅರುವಾಗಿಸಿ ತೋರುವಾ

ತೋರುವಾ

ತೋರಿದನ್ನು ಗುರು ಹಾಕಿಸಿ

ಕರಸ್ಥಲಕ್ಕೆ ನೀಡುವಾ

ಕರಸ್ಥಲಕ್ಕೆ ನೀಡುವಾ

ಕಸದಲ್ಲಿ ರಸವನ್ನು

ಅರಸುವ ಹಿರಿಭಾವ

ಅರಸುವ ಹಿರಿಭಾವ

ಆ ರಸದಲ್ಲಿ ಸಮರಸವ

ಬೆರೆಸುವ ಸಮಭಾವ

ಬೆರೆಸುವ ಸಮಭಾವ

ಸಮರಸದಲ್ಲಿ ಶಿವ

ಸಮತೆ ಕಾಣ್ವ ವೀರಶೈವರ

ಶ್ರೀ ಶಿವಾಚಾರ್ಯರಿಗೆ ವಂದನೆ

ಜಗದಾಚಾರ್ಯರಿಗೆ ಅಭಿನಂದನೆ

♫♫♫♫♫♫♫♫♫♫♫♫

ಜೀವಾತ್ಮ ಪರಮಾತ್ಮನ ಕಿರಣಾ

ಕಿರಣಾ

ಎಂಬ ಸಾಕ್ಷಿ ಇಷ್ಟಲಿಂಗ ಧಾರಣಾ

ಧಾರಣಾ

ಅಂತ ಶ್ರೀ ಲಿಂಗಿಗೆ

ಜನನ ಮರಣವಿಲ್ಲೆನುವಾ

ಜನನ ಮರಣವಿಲ್ಲೆನುವಾ

ಜನನಕ್ಕೆ ಲಿಂಗೋದ್ಭವವೆನ್ನುವಾ

ಉದ್ಭವವೆನ್ನುವಾ

ಮರಣಕ್ಕೆ ಲಿಂಗೈಕ್ಯವೆಂದೆನ್ನುವಾ

ಎಂದೆನ್ನುವಾ

ಸೃಷ್ಠಿ ಸ್ಥಿತಿ ಲಯಲಿಂಗ ಲೀಲೆ

ಎನುವ ಶಿವಮತದ

ಶ್ರೀ ಶಿವಾಚಾರ್ಯರಿಗೆ ವಂದನೆ

ಜಗದಾಚಾರ್ಯರಿಗೆ ಅಭಿನಂದನೆ

♫♫♫♫♫♫♫♫♫♫♫♫

ಉಣ್ಣೊ ಅನ್ನ ಶಿವಪ್ರಸಾದವೆನ್ನುವಾ

ಎನ್ನುವಾ

ಕುಡಿಯುವ ಜಲ

ಪಾದೋದಕವೆನ್ನುವಾ

ಎನ್ನುವಾ

ಶಿಲಿಯಲ್ಲಿ ಶಿವರೂಪವನ್ನು

ಕಂಡು ಬಾಗುವಾ

ರೂಪ ಕಂಡು ಬಾಗುವಾ

ಹೆಣ್ಣಿನಲ್ಲಿ ತಾಯಿ

ಶಕ್ತಿಯನ್ನು ಕಾಣುವಾ

ಶಕ್ತಿ ಕಾಣುವಾ

ಆ ಶಕ್ತಿ ಶಿವನಲ್ಲೊಂದಿರಿಸಿ

ನೆನೆಯುವಾ

ಒಂದಿರಿಸಿ ನೆನೆಯುವಾ

ನೆನೆದಂತೆ ಮನನ

ಮಾಡಿಕೊಳ್ಳುವ ವೀರಶೈವರ

ಶ್ರೀ ಶಿವಾಚಾರ್ಯರಿಗೆ ವಂದನೆ

ಜಗದಾಚಾರ್ಯರಿಗೆ ಅಭಿನಂದನೆ

♫♫♫♫♫♫♫♫♫♫♫♫

ಜೀವಿಗೆ ಆ ದೇವ ಪಟ್ಟ ಕಟ್ಟುವಾ

ಕಟ್ಟುವಾ

ಆ ದೇವಗೆ ಜೀವತ್ವ ಪ್ರತಿಸ್ಠಾಪಿಸುವಾ

ಸ್ಠಾಪಿಸುವಾ

ಜೀವ ದೇವರಲ್ಲಿ ನಿಜದ

ಅಭಿನ್ನತೆ ಸ್ಥಾಪಿಸುವಾ

ಅಭಿನ್ನತೆ ಸ್ಥಾಪಿಸುವಾ

ಮರ್ತ್ಯಲೋಕವನ್ನು

ಸತ್ಯಲೋಕಗೈಯ್ಯುವಾ

ಲೋಕಗೈಯ್ಯುವಾ

ಕರ್ಮಕ್ಕೆ ಧರ್ಮ

ಸಂಸ್ಕಾರವೀಯುವಾ

ಸಂಸ್ಕಾರವೀಯುವಾ

ಭವಕೆಲ್ಲಕೆ ಶಿವದೀಕ್ಷೆಯ

ಕೊಡುವ ವೀರಶೈವರ

ಶ್ರೀ ಶಿವಾಚಾರ್ಯರಿಗೆ ವಂದನೆ

ವಂದನೆ

ಜಗದಾಚಾರ್ಯರಿಗೆ ಅಭಿನಂದನೆ

ಅಭಿನಂದನೆ

ಪಂಚ ಪೀಠಾಧೀಶ

ಜಗದ್ಗುರುಗಳೈವರಿಗೆ

ಶಿರ ಸಾಷ್ಟಾಂಗ ಪ್ರಣಾಮದರ್ಪಣೆ

ಪ್ರಣಾಮದರ್ಪಣೆ

ಪ್ರಣಾಮದರ್ಪಣೆ

ಪ್ರಣಾಮದರ್ಪಣೆ

 

 Shree Shiva achaararige Vandane Song Lyrics

Shri Shivacharyarige Vandane Song Lyrics

Sri Shivachaararige Vandane Song Lyrics

Shri Shiva aacharyarige Vandane Song Lyrics

No comments:

Post a Comment

Write Something about PK Music

new1

new2

new5