Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಇದೇ ನೋಟ ಇದೇ ಆಟ - Ide Nota Ide Aata Song Lyrics - Ade Kannu

ಚಿತ್ರ : ಅದೇ ಕಣ್ಣು
ಸಂಗೀತ: ಜಿ.ಕೆ ವೆಂಕಟೇಶ
ಗಾಯನ: ಡಾ. ರಾಜ್, ವಾಣಿ ಜಯರಾಂ
ಸಾಹಿತ್ಯ: ಚಿ. ಉದಯಶಂಕರ್


ಇದೇ ನೋಟ ಇದೇ ಆಟ
ಇದೇ ನೋಟ ಇದೇ ಆಟ
ಕಂಡಂದೆ ಚೆಲುವೆ ನಾ ಸೋತೆ
ಕಂಡಂದೆ ಚೆಲುವೆ ನಾ ಸೋತೆ
ಅಂದು ನಿನ್ನ ಮಾತು ಕೇಳಿ
ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು
ಮನಸೋತೆನು
ಅಂದು ನಿನ್ನ ಮಾತು ಕೇಳಿ
ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು
ಮನಸೋತೆನು
ಇದೇ ನೋಟ ಇದೇ ಆಟ
ಕಂಡಂದೆ ಚೆಲುವ ನಾ ಸೋತೆ
ಕಂಡಂದೆ ಚೆಲುವ ನಾ ಸೋತೆ

♫♫♫♫♫♫♫♫♫♫♫♫

ನಿನ್ನ ಮಾತು ಮುತ್ತಂತೆ
ನಿನ್ನ ಪ್ರೀತಿ ಜೇನಂತೆ
ನಿನ್ನ ಸೇರಿ ಬಾಳಿಂದು
ಸೊಗಸಾಗಿದೆ
ನಿನ್ನ ಕೆನ್ನೆ ಹೂವಂತೆ
ನಿನ್ನ ಮೈಯ್ಯಿ ಹೊನ್ನಂತೆ
ನಿನ್ನ ರೂಪ ಕಣ್ಣಲ್ಲೇ
ಮನೆ ಮಾಡಿದೆ

ನಿನ್ನ ಮಾತು ಮುತ್ತಂತೆ
ನಿನ್ನ ಪ್ರೀತಿ ಜೇನಂತೆ
ನಿನ್ನ ಸೇರಿ ಬಾಳಿಂದು
ಸೊಗಸಾಗಿದೆ
ಹಾ ನಿನ್ನ ಕೆನ್ನೆ ಹೂವಂತೆ
ನಿನ್ನ ಮೈಯ್ಯಿ ಹೊನ್ನಂತೆ
ನಿನ್ನ ರೂಪ ಕಣ್ಣಲ್ಲೇ
ಮನೆ ಮಾಡಿದೆ
ಮುದ್ದು ಮುದ್ದು ಮಾತನಾಡಿ
ನನ್ನ ಗೆದ್ದೆ
ನಿನ್ನ ತೋಳ ತೆಕ್ಕೆಯಲ್ಲಿ
ನಾನು ಬಿದ್ದೆ
ಮುದ್ದು ಮುದ್ದು ಮಾತನಾಡಿ
ನನ್ನ ಗೆದ್ದೆ
ನಿನ್ನ ತೋಳ ತೆಕ್ಕೆಯಲ್ಲಿ
ನಾನು ಬಿದ್ದೆ
ಇದೇ ನೋಟ ಇದೇ ಆಟ
ಕಂಡಂದೆ ಚೆಲುವೆ ನಾ ಸೋತೆ
ಕಂಡಂದೆ ಚೆಲುವೆ ನಾ ಸೋತೆ
ನೋಡಿ ನೋಡಿ ಹೀಗೆ ನೋಡಿ
ಕೊಲ್ಲಬೇಡವೋ
ಇನ್ನು ಎಂದು ನಲ್ಲ ದೂರ
ನಿಲ್ಲಬೇಡವೋ
ನೋಡಿ ನೋಡಿ ಹೀಗೆ ನೋಡಿ
ಕೊಲ್ಲಬೇಡವೋ
ಇನ್ನು ಎಂದು ನಲ್ಲ ದೂರ
ನಿಲ್ಲಬೇಡವೋ
♫♫♫♫♫♫♫♫♫♫♫♫

ನಿನ್ನ ನಾನು ಬಿಟ್ಟೇನೆ
ಬಿಟ್ಟು ಹೋಗಿ ಕೆಟ್ಟೇನೆ
ನನ್ನ ಪ್ರಾಣ ನೀನಾದೆ
ಮನಮೋಹಿನಿ
ಸಾಕು ಇನ್ನು ಬೇರೇನೂ
ಬೇಡಲಾರೆ ನಿನ್ನನ್ನು
ನಿನ್ನ ಮಾತು ನನಗಾಯ್ತು
ಸಂಜೀವಿನಿ
321

ನಿನ್ನ ನಾನು ಬಿಟ್ಟೇನೆ
ಬಿಟ್ಟು ಹೋಗಿ ಕೆಟ್ಟೇನೆ
ನನ್ನ ಪ್ರಾಣ ನೀನಾದೆ
ಮನಮೋಹಿನಿ
ಹಾ ಸಾಕು ಇನ್ನು ಬೇರೇನೂ
ಬೇಡಲಾರೆ ನಿನ್ನನ್ನು
ನಿನ್ನ ಮಾತು ನನಗಾಯ್ತು
ಸಂಜೀವಿನಿ
ಹಹಾ ನೂರು ಜನ್ಮ ಬಂದರೇನು
ಕನ್ಯಾಮಣಿ
ಅಂದು ಇಂದು ಮುಂದೆ ಎಂದು
ನೀನೆ ರಾಣಿ
ನೂರು ಜನ್ಮ ಬಂದರೇನು
ಕನ್ಯಾಮಣಿ
ಅಂದು ಇಂದು ಮುಂದೆ ಎಂದು
ನೀನೆ ರಾಣಿ
ಇದೇ ನೋಟ ಇದೇ ಆಟ
ಕಂಡಂದೆ ಚೆಲುವ ನಾ ಸೋತೆ
ಕಂಡಂದೆ ಚೆಲುವ ನಾ ಸೋತೆ
ಅಂದು ನಿನ್ನ ಮಾತು ಕೇಳಿ
ಬೆರಗಾದೆನು
ಹಾ..
ಇಂದು ನಿನ್ನ ಸ್ನೇಹ ಕಂಡು
ಮನಸೋತೆನು
ಅಂದು ನಿನ್ನ ಮಾತು ಕೇಳಿ
ಬೆರಗಾದೆನು
ಹುಂ ಹುಂ
ಇಂದು ನಿನ್ನ ಸ್ನೇಹ ಕಂಡು
ಮನಸೋತೆನು
ಇದೇ ನೋಟ ಇದೇ ಆಟ
ಕಂಡಂದೆ ಚೆಲುವೆ ನಾ ಸೋತೆ
ಕಂಡಂದೆ ಚೆಲುವೆ ನಾ ಸೋತೆ
ಲ್ಲ ಲ್ಲ ಲಾ ಲಾ
ಲಾ ಲಾ
ಲ್ಲ ಲ್ಲ ಲಾ ಲಾ
ಲಾ ಲಾ
ಲ್ಲ ಲ್ಲ ಲಾ ಲಾ
ಲಾ ಲಾ
ಲ್ಲ ಲ್ಲ ಲಾ ಲಾ
ಲಾ ಲಾ

No comments:

Post a Comment

Write Something about PK Music

new1

new2

new5