ಚಿತ್ರ: ಧೃವತಾರೆ
ಸಾಹಿತ್ಯ : ಚಿ ಉದಯಶಂಕರ್
ಸಂಗೀತ : ಉಪೇಂದ್ರಕುಮಾರ್
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂಬಾಣವಾಯಿತು ಎನಿಸುತಿದೆ
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂಬಾಣವಾಯಿತು ಎನಿಸುತಿದೆ
♫♫♫♫♫♫♫♫♫♫♫♫♫
ಮಾಮರ ತೂಗುತ
ಚಾಮರ ಹಾಕುತ
ಪರಿಮಳ ಎಲ್ಲೆಡೆ ಚೆಲ್ಲುತಿರೆ
ಗಗನದ ಅಂಚಲಿ
ರಂಗನು ಚೆಲ್ಲುತ
ಸಂಧ್ಯೆಯು ನಾಟ್ಯವ ಆಡುತಿರೆ
ಪ್ರಣಯದ ಕಾಲ ಬಂತು
ನೋಡಿ ಎಂದು ಹಾಡಿ
ಕೋಗಿಲೆಯು ನಲ
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂಬಾಣವಾಯಿತು ಎನಿಸುತಿದೆ
♫♫♫♫♫♫♫♫♫♫♫♫♫
ಪ್ರೇಮದ ಭಾವಕೆ
ಪ್ರೀತಿಯ ರಾಗಕೆ
ಮೌನವೆ ಗೀತೆಯ ಹಾಡುತಿರೆ
ಸರಸದ ಸ್ನೇ ಹಕೆ
ಒಲವಿನ ಕಾಣಿಕೆ
ನೀಡಲು ಅಧರವು ಅರಳುತಿರೆ
ಎಂದಿಗು ಹೀಗೆ
ಬಾಳುವಾಸೆ ತುಂಬಿ ಬಂದು
ಪ್ರೇಮಿಗಳು ನಲಿಯುತಿರೆ
ಪ್ರೇಮಿಗಳು ನಲಿಯುತಿರೆ
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂಬಾಣವಾಯಿತು ಎನಿಸುತಿದೆ
ಹೂಬಾಣವಾಯಿತು ಎನಿಸುತಿದೆ
ಹೂಬಾಣವಾಯಿತು ಎನಿಸುತಿದೆ
ಹೂಬಾಣವಾಯಿತು ಎನಿಸುತಿದೆ
No comments:
Post a Comment
Write Something about PK Music