ತನ್ನ ತಾನು
ತಿಳಿದ ಮೇಲೆ
ಸಂಗೀತ :
ಸಿದ್ದಯ್ಯ ಸ್ವಾಮಿ ಜವಳಿ
ಸಾಹಿತ್ಯ:
ಚಂದ್ರಮಪ್ಪ ಮಾಸ್ತರ್
ಗಾಯಕರು :
ಮಾರುತಿ ಕಾಸರ,
ನರೋಣಾ ಸುವರ್ಣ, ಲಕ್ಷ್ಮಿ,
ಶೃತಿ, ಛಾಯಾ, ನಂದಿತಾ
ಈ ಧರೆಯ ಭೋಗವ ಬಿಟ್ಟು
ಗುರುಪಾದ ಸೇವೆಯಲ್ಲಿ
ಬರ್ತಿರಾ ಇಲ್ಲೇ ಇರ್ತೀರಾ
ಗುರುಪಾದ ಸೇವೆಯಲ್ಲಿ
ಬರ್ತಿರಾ ಇಲ್ಲೇ ಇರ್ತೀರಾ
♫♫♫♫♫♫♫♫♫♫♫♫
ಅಕ್ಕರದಿ ಸತಿ ಪುತ್ರ
ಅಣ್ಣ ತಮ್ಮರ ಬಿಟ್ಟು
ಸಕ್ಕರೆ ಬೆರೆಸಿದ
ಸವಿ ಊಟವನು ಬಿಟ್ಟು
ತೆಕ್ಕೆ ಗಾದಿಯ ಬಿಟ್ಟು
ಸೊಕ್ಕು ಶಡುವನು ಬಿಟ್ಟು
ರೊಕ್ಕ ತಿಜೂರಿಯ
ಕೀಲಿಕೈಯ್ಯನು ಬಿಟ್ಟು
ಬರ್ತಿರಾ ಇಲ್ಲೇ ಇರ್ತೀರಾ
♫♫♫♫♫♫♫♫♫♫♫♫
ಇಷ್ಟ ಮಿತ್ರರ ಬಿಟ್ಟು
ದುಷ್ಟ ಚಟಗಳ ಬಿಟ್ಟು
ಕಟೇದ ಕಲ್ಲಿನ ಕಂಬ
ಕಟ್ಟಿದ ಮನೆ ಬಿಟ್ಟು
ಅಧಿಕಾರ ಮದ ಬಿಟ್ಟು
ಕುಟೀಲ ಸಂಸಾರದಾ
ಕಿಟಿಕಿಟಿಯನು ಬಿಟ್ಟು
ಬರ್ತಿರಾ ಇಲ್ಲೇ ಇರ್ತೀರಾ
ನೀವು ಬರ್ತಿರಾ ಇಲ್ಲೇ ಇರ್ತೀರಾ
♫♫♫♫♫♫♫♫♫♫♫♫
ತಂಟೆ ತಗಲವ ಮಾಡಿ
ಗಳಿಸಿದ ಹೊಲಬಿಟ್ಟು
ಎಂಟು ಎತ್ತಿನ ಕಮತ
ಎಲ್ಲಾ ಐಶ್ವರ್ಯ ಬಿಟ್ಟು
ನೆಂಟ ಬಂಟರಗಳ
ಕೂಡ ಗುದ್ಯಾಡಿ
ಗಂಟಲ ಹರಕೊಂಡು
ಗಳಿಕೆ ಮಾಡದು ಬಿಟ್ಟು
ಬರ್ತಿರಾ ಇಲ್ಲೇ ಇರ್ತೀರಾ
ನೀವು ಬರ್ತಿರಾ ಇಲ್ಲೇ ಇರ್ತೀರಾ
♫♫♫♫♫♫♫♫♫♫♫♫
ಕಾಮಕ್ರೋಧವ
ಬಿಟ್ಟು
ನಿಯಮ ಹವನವ
ಬಿಟ್ಟು
ನೇಮ ನಿತ್ಯವ
ಬಿಟ್ಟು
ತಾಮಸ ಗುಣ
ಸುಟ್ಟು
ಸ್ವಾಮಿಯ
ಕೂಡಿ
ರಾಮಲಿಂಗನ
ಪಾದ
ನೇಮದಿ ಭಜಿಸುವೆ
ಪ್ರೇಮದಿಂದಲಿ
ನೀನು
ಬರ್ತಿರಾ ಇಲ್ಲೇ ಇರ್ತೀರಾ
ನೀವು ಬರ್ತಿರಾ ಇಲ್ಲೇ ಇರ್ತೀರಾ
ಈ ಧರೆಯ ಭೋಗವ ಬಿಟ್ಟು
ಗುರುಪಾದ ಸೇವೆಯಲ್ಲಿ
ಬರ್ತಿರಾ ಇಲ್ಲೇ ಇರ್ತೀರಾ
ನೀವು ಬರ್ತಿರಾ ಇಲ್ಲೇ ಇರ್ತೀರಾ
No comments:
Post a Comment
Write Something about PK Music