Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

Haleya Mane Ihudilli Song Lyrics in Kannada - Raghavendra Beejaadi Bhavageethe


ಸಾಹಿತ್ಯ:- ಸತೀಶ್ ಹೆಗಡೆ ಶಿರಸಿ
ಸಂಗೀತ:- ರಾಘವೇಂದ್ರ ಬೀಜಾಡಿ
ವಾದ್ಯವೃಂದ:- ಸಮೀರ್ ರಾವ್
ಗಾಯಕ :-ರಾಘವೇಂದ್ರ ಬೀಜಾಡಿ


ಹಳೆಯ ಮನೆ ಇಹುದಿಲ್ಲಿ

ಹೊಸ ಜನರು ಬರುತಿಲ್ಲ

ಖಾಲಿ ಕಾಣುತಲಿಹುದು

ಹೊರ ಜಗುಲಿಯು


ದೇವನೊಬ್ಬನೆ ತಾನು

ಧ್ಯಾನಸ್ಥನಾಗಿಹನು ಧೂಳಿನಲಿ

ಮುಳುಗುತಿಹುದಾ ಕೋಣೆಯು

ಹಳೆಯ ಮನೆ ಇಹುದಿಲ್ಲ

ಹೊಸ ಜನ ಬರುತಿಲ್ಲ

ಖಾಲಿ ಕಾಣುತಲಿಹುದು

ಹೊರ ಜಗುಲಿಯು

ದೇವನೊಬ್ಬನೆ ತಾನು

ಧ್ಯಾನಸ್ಥನಾಗಿಹನು ಧೂಳಿನಲಿ

ಮುಳುಗುತಿಹುದಾ ಕೋಣೆಯು


♬♬♬♬♬♬♬♬♬♬♬♬


ಪಾತ್ರೆ ಪಗಡೆಯ ಸರಕು

ಮನೆತುಂಬ ಕಾಣಿಸದು

ಮೂರು ಮತ್ತೊಬ್ಬರಿಗೆ

ಕಡಿಮೆ ಸಾಕು


ಹಿತ್ತಲಿನ ದಾರಿಯಲಿ

ಹಸಿ ಹುಲ್ಲು ಬೆಳೆದುಹುದು

ಮನೆಯಲ್ಲಿ ಉಳಿದಿಲ್ಲ ಮುದ್ದು ಬೆಕ್ಕು

ಮೆತ್ತಿ ಏರುವ ಏಣಿ

ಅಲ್ಲಾಡುತಿಹುದಿಲ್ಲಿ

ಹತ್ತಿದರೆ ಮೇಲೆಲ್ಲ ಬಿಂಜಲುಗಳೆ

ಅಂಗಳದಿ ನಿಂತಿರುವ

ಮರದ ಕಂಬಗಳನ್ನು

ಏರಿ ಮಣ್ಣಾಗಿಸುತಲಿಹುದು ವರಲೇ

♬♬♬♬♬♬♬♬♬♬♬♬


ಮುಖ್ಯದ್ವಾರಕೆ ಮಾವಿನೆಲೆಯ

ತೋರಣ ಕಟ್ಟಿ

ಸಮಯ ಸರಿದಿರಬಹುದು ತಿಂಗಳಾಗಿ

ಬಿಸಿಗಾಳಿ ಮನೆಯೊಳಗೇ

ಬೀಸುತಿರಲಾಗಾಗ

ಕಸವಾಗುವುದುದುರುವಾಗ

ಎಲೆಗಳೊಣಗಿ

ಮಳೆಗಾಲದಲ್ಲಿ ಮನೆಯ ಮಾಡು

ಸೋರುವುದೆಂಬ ಚಿಂತೆ ಇದೆ

ಸರಿ ಮಾಡುವವರು ಇಲ್ಲ

ಪಟ್ಟಣದ ಪೊಟ್ಟಣಕೆ

ತಾರುಣ್ಯ ಸಾಗಿಹುದು

ತೆವಳುತಿದೆ ವಾರ್ಧಕ್ಯವಿಲ್ಲಿ ಮೆಲ್ಲ

ಅಂಗಳದ ತುದಿಯಲ್ಲಿ

ನೆಟ್ಟಿರುವ ತುಳಸಿಗಿಡ

ನೋಡುತಿದೆ ಮನೆಯ

ನಿಟ್ಟುಸಿರನಿಟ್ಟು

ಗಡಿಯಾ ಬೇಲಿಯ ಬಳಸಿ

ಮಲ್ಲೆಯರಳುತಲಿಹುದು

ಮಾಲೆಯಾಗುವ ಆಸೆಯನ್ನು ಹೊತ್ತು

ಮಾಲೆಯಾಗುವ ಆಸೆಯನ್ನು ಹೊತ್ತು

ಮಾಲೆಯಾಗುವ ಆಸೆಯನ್ನು ಹೊತ್ತು

ಮಾಲೆಯಾಗುವ ಆಸೆಯನ್ನು ಹೊತ್ತು

 

 

 Haleya Mane Ihudilli Song Lyrics in English 


Haleya Mane Ihudilli

Hosa Janaru Barutilla

Khaali Kaanutalihudu

Hora Jaguliyu

Devanobbane Taanu

Dhyaanasthanaagihanu

Dhoolinali

Mulugutihudaa Koneyu

Haleya Mane Ihudilli

Hosa Janaru Barutilla

Khaali Kaanutalihudu

Hora Jaguliyu

Devanobbane Taanu

Dhyaanasthanaagihanu

Dhoolinali

Mulugutihudaa Koneyu

 

Paatre Pagadeya Saddu

Manetumba Kaanisadu

Mooru Mattobbarige

Kadime Saaku

Hittalina Daariyali

Hasi Hullu Beledihudu

Maneyalli Ulidilla Muddu Bekku

Metti Eruva Eni

Allaadutihudilli

Hattidale Melella Binjalugale

Angaladi Nintiruva

Marada Kambagalannu

Eri Mannaagisutalihudu Varale

 

Mukhyadvaarake Maavineleya

Torana Katti

Samaya Saridirabahudu Tingalaagi

Bisigaali Maneyolage

Beesutiralaagaaga

Kasavaagatuduruvaaga

Elegalonagi

Malegaaladalli Maneya Maadu

Soruvudemba Chinte Ide

Sari Maaduvavaru Illa

Pattanada Pottanake

Taarunya Saagihudu

Tevalutide Vaardhakyavilli Mella

Anagalada Tudiyalli

Nettiruva Tulasigida

Nodutide Maneya

Nittusiranittu

Gadiya Beliya Balasi

Malleyaralutalihudu

Maaleyaaguva Aaseyannu Hottu

 

No comments:

Post a Comment

Write Something about PK Music

new1

new2

new5