ಚಿತ್ರ: ಮೊಗ್ಗಿನ ಮನಸು
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋಮೂರ್ತಿ
ಗಾಯನ: ಶ್ರೇಯಾ ಘೋಷಾಲ್
ಮಳೆ ಬರುವ ಹಾಗಿದೆ
ಮನವೀಗ ಹಾಡಿದೆ
ಹೃದಯದಲ್ಲಿ ಕೂತು ನೀನು
ನನ್ನ ಕೇಳಬೇಕಿದೆ
ಆಆಆಆಆಆಆಆಆ
ಮಳೆ ಬರುವ ಹಾಗಿದೆ
ಮನವೀಗ ಹಾಡಿದೆ
ಮಳೆ ಬರುವ ಹಾಗಿದೆ
ಮನವೀಗ ಹಾಡಿದೆ
ಹೃದಯದಲ್ಲಿ ಕೂತು ನೀನು
ನನ್ನ ಕೇಳ ಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು
ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ
♬♬♬♬♬♬♬♬♬♬♬♬
ನಿನ್ನ ನಗುವಿನಲ್ಲೇ
ನನ್ನ ನಸುಕು
ನಿನ್ನ ರೂಪಧರಿಸಿ
ಬಂದು ನಲಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ
ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು
ಪ್ರೀತಿ ಹೇಳಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು
ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ
♬♬♬♬♬♬♬♬♬♬♬♬
321
ಎದೆಯ ಬಾಗಿಲಲ್ಲೇ
ನಿನ್ನ ಸುಳಿವು
ಸಣ್ಣ ಆಸೆಯಲ್ಲೇ
ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು
ಮೆರವಣಿಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ
ನಿನ್ನ ಕಾಡಬೇಕಿದೆ
ಮಳೆ ಬರುವ ಹಾಗಿದೆ
ಮನವೀಗ ಹಾಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಹೃದಯದಲ್ಲಿ ಕೂತು ನೀನು
ನನ್ನ ಕೇಳಬೇಕಿದೆ
ಕಾಣದಂತೆ ನಿಂತು ನೀನು
ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ
No comments:
Post a Comment
Write Something about PK Music