Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

Nee Hodha Marudina Song Lyrics - Arive Ambedkar - Marali Baa

PK-Music

Song: Nee Hodha Marudina
Program: Marali Baa
Singer: Mullooru Shivananda
Music Director: M S Maruthi
Lyricist: Chennanna Olekara
Music Label : Lahari Music



ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

ಹಾಗ್ಯಾದೋ ಬಾಬಾ ಸಾಹೇಬ

ನಿನ್ನಂಗ ದುಡಿದವರು

ಕಳಕಳಿಯ ಪಡುವವರು

ಇನ್ನುತನ ಬರಲಿಲ್ಲೊಬ್ಬ

ಇನ್ನುತನ ಬರಲಿಲ್ಲೊಬ್ಬ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

♬♬♬♬♬♬♬♬♬♬♬♬

ಪ್ರತಿನಿತ್ಯ ಎದ್ದಾಗ

ನಿಮಸುದ್ದಿ ಸಂಭ್ರಮವು

ಪ್ರತಿನಿತ್ಯ ಎದ್ದಾಗ

ನಿಮಸುದ್ದಿ ಸಂಭ್ರಮವು

ದೇಕುವುದು ತಪ್ಪಿಲ್ಲ ನಿಮಗೆ

ಹೋದ ಹೋದಲೆಲ್ಲ

ಮೇಲವರ ಆಟಗಳು

ಉರಿ ಹಚ್ಚಿ ಬಿಡುತ್ತಾರ ಒಳಗ

ಉರಿ ಹಚ್ಚಿ ಬಿಡುತ್ತಾರ ಒಳಗ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

♬♬♬♬♬♬♬♬♬♬♬♬


ಎಲ್ಲಿ ಕೇಳಿದರಲ್ಲಿ

ಬೂಟುಗಾಲಿನ ಸದ್ದು

ಎಲ್ಲಿ ಕೇಳಿದರಲ್ಲಿ

ಬೂಟುಗಾಲಿನ ಸದ್ದು

ತರತರದ ನೋವುಗಳು ನಮಗ

ತಮ್ಮಂಗೆ ಇರದಿದ್ರ

ತಲೆ ಕಡಿದು ಹಾಕುವರು

ಹೆಸರಿಗ ಸ್ವಾತಂತ್ರ ನಮಗ

ಹೆಸರಿಗ ಸ್ವಾತಂತ್ರ ನಮಗ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

♬♬♬♬♬♬♬♬♬♬♬♬


ಹೋಗಿ ಬರೋ ದಾರಿಲಿ

ಅಡ್ಡಗಾಲುಗಳು ಸೇರಿ

ಹೋಗಿ ಬರೋ ದಾರಿಲಿ

ಅಡ್ಡಗಾಲುಗಳು ಸೇರಿ

ಮುಳ್ಳಲ್ಲು ಹಾಸ್ಯಾವ ಪೂರ

ಹೆಚ್ಚಿಗೆ ಬೆಳೆದವರ

ಉಳಿದವರ ಜೀವಗಳು

ಹಗಲಾಗ ಹೊಡೆತಾರ ಟಾರ

ಹಗಲಾಗ ಹೊಡೆತಾರ ಟಾರ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು  

♬♬♬♬♬♬♬♬♬♬♬♬

ಮಾತು ಗಿಳಿ ಹಂಗವರು

ಆಚಾರ ಬದನಿಕಾಯಿ

ಮಾತು ಗಿಳಿ ಹಂಗವರು

ಆಚಾರ ಬದನಿಕಾಯಿ

ದುಡಿದಂಗೆ ನಡೆವುದಕಾವೈರ

ಜಗತ್ತಿನೆಲ್ಲಾ ಧರ್ಮ

ಒಂದೇ ಹೇಳಿರುವಾಗ

ಇದು ಮೂಲ ಕುಲದಾಲಕಾರ

ನಿರ್ಮುಲ ಕುಲದಾಲಕಾರ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

♬♬♬♬♬♬♬♬♬♬♬♬

ಕೈಕಾಲು ಕಿವಿ ಮೂಗು

ಮೈಮನಸು ತಲೆ ಕಣ್ಣು

ಕೈಕಾಲು ಕಿವಿ ಮೂಗು

ಮೈಮನಸು ತಲೆ ಕಣ್ಣು

ಕಳಕೊಂಡ ಬರಡ ಗಿಡ ನಾವು

ಮೈ ತುಂಬಾ ಮನತುಂಬಾ

ಸಿಕ್ಕವರ ಮುಖಮುದ್ರೆ

ಚೀರಾಟ ಹಾರಾಟ ಸಾವೋ

ಚೀರಾಟ ಹಾರಾಟ ಸಾವೋ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

♬♬♬♬♬♬♬♬♬♬♬♬

ಎಷ್ಟ೦ತ ಉರಿತಾರ

ಎಷ್ಟಂತ ಹರಿತಾರ

ಎಷ್ಟ೦ತ ಉರಿತಾರ

ಎಷ್ಟಂತ ಹರಿತಾರ

ತಾಳದಕ್ಕೂ ಮಿತಿಯುಂಟು ಇಲ್ಲಿ

ತಾಳಿ ತಾಳಿಯೂ ಒಮ್ಮೆ

ಗೂಳ್ಯಾಗಿ ಗುದ್ದುವರು

ಸಾಮಾನ್ಯನಲ್ಲೋ ಬಡಜೀವಿ

ಸಾಮಾನ್ಯನಲ್ಲೋ ಬಡಜೀವಿ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

♬♬♬♬♬♬♬♬♬♬♬♬

ಬಾಬಾಸಾಹೇಬರೇನು

ಹುಚ್ಚರು ಅಲ್ಲವೆ ಅಲ್ಲ

ಬಾಬಾಸಾಹೇಬರೇನು

ಹುಚ್ಚರಲ್ಲವೆ ಅಲ್ಲ

ಗಾಂಧಿ ಜೊತೆ ಇರಲಿಲ್ಲ ಸುಮ್ಮ

ಅಷ್ಟು ಒದ್ದಾಡಿದಕೆ

ಇಂಗೈತೆ ನಮ ಬದುಕು

ತಿಳಿಯಿತೆ ಈಗ್ಲಾದ್ರು ತಮ್ಮ

ತಿಳಿಯಿತೆ ಈಗ್ಲಾದ್ರು ತಮ್ಮ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

ಹಾಗ್ಯಾದೋ ಬಾಬಾ ಸಾಹೇಬ

ನಿನ್ನಂಗ ದುಡಿದವರು

ಕಳಕಳಿಯ ಪಡುವವರು

ಇನ್ನುತನ ಬರಲಿಲ್ಲೊಬ್ಬ

ಇನ್ನುತನ ಬರಲಿಲ್ಲೊಬ್ಬ

ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

 

No comments:

Post a Comment

Write Something about PK Music

new1

new2

new5