ಚಿತ್ರ: ರಾಗ ತಾಳ
ಗಾಯಕರು: SPB
ಸಂಗೀತ : ಎಂ ರಂಗರಾವ್
ಸಾಹಿತ್ಯ: ಸಂದಗೋಪಾಲ್ ರೆಡ್ಡಿ
ಆಹಾಹಾ
ಆಹಹಾಹ
ಹಹಹಾ
ಆಹಹಾ ಆಹಹಾ ಆಹಹಾ
ಓ.. ಚೆಲುವೇ
ಹಂಸದ ನಡೆಯವಳೇ
ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ
ನಾ ಮೈಮರೆತಿರುವೇ
♬♬♬♬♬♬♬♬♬♬♬♬
ನನ್ನ ಮನಸಿನ ಮಂದಿರದೀ
ದೇವತೆ ನೀನಾದೇ
ನನ್ನ ಕನಸಿನ ಲೋಕದಲಿ
ರಾಣಿ ನೀನಾದೇ
ನನ್ನ ಮಧುರ ಸ್ಮ್ರತಿಗಳ ಅಲೆಗಳಲಿ
ತೇಲುವ ದೋಣಿಯು ನೀ
ಬಾ ತೀರಕೆ ಕಾಯುತಿದೇ
ಈ ಹೃದಯವು ಮಿಡಿಯುತಿದೇ
ಓ ಚೆಲುವೇ
♬♬♬♬♬♬♬♬♬♬♬♬
ವಿಕಸಿತ ಕುಸುಮಗಳು
ನಿನ್ನ ಹುಸಿನಗೆ ಮೂಡುವುದು
ತೇಲುವ ಮುಗಿಲಿನಲೂ
ನಿನ್ನ ರೂಪವೇ ಕಾಣುವುದು
ನನ್ನ ದೇಹದ ಪ್ರತಿ ಕಣಕಣದಲ್ಲೂ
ನೀನೇ ತುಂಬಿರುವೆ
ಕಣ್ ತೆರೆದರೆ ಕಾಣಿಸುವೆ
ಈ ಮನದಲಿ ಉಳಿದಿರುವೇ
ಓ ಚೆಲುವೇನಾಟ್ಯದ ಸಿರಿ ನವಿಲೇ
ಹಂಸದ ನಡೆಯವಳೇ
ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ
ನಾ ಮೈಮರೆತಿರುವೇ
ಸುಂದರಿಯೇನನ್ನಾ
ಆಶಾ ಮಂಜರಿಯೇ
ನನ್ನ ತನುವಿನ ಅಣುಅಣುವೇ
ನಿನ್ನ ಪ್ರೇಮದ ಪಂಜರದೀ
ಜಪಿಸುವ ಗಿಣಿಯಾದೆ
ನಾ ತಪಿಸುವ ಗಿಣಿಯಾದೇ
ಓ ಚೆಲುವೇ
ಓ ಚೆಲುವೇ
ಓ ಚೆಲುವೇ
ಓ ಚೆಲುವೇ
No comments:
Post a Comment
Write Something about PK Music