Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನೀನೇ ರಾಮ ನೀನೇ ಶಾಮ mukunda murari neene rama neene shama lyrics


                              KARAOKE


ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು
ನೀನೇ ಕರ್ಮ ನೀನೇ ಧರ್ಮ
ನೀನೇ ಮರ್ಮ ನೀನೇ ಪ್ರೇಮ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ

ಮುಕುಂದ
 ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು

ಗುಡಿಯ
 ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ  ತಕರಾರು
ಅಣು ಅಣು  ಅಣು ಒಳಗೆ  ಕುಳಿತಿರುವೆ 

ಮುಕುಂದ
 ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ಯುಗದಯುಗದ
 ಮೃಗದ ಖಗದ ಉಸಿರಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು
ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ

ನಿಮ್ಮ
 ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ

ಮುಕುಂದ
 ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ನೀನೇ
 ರಾಮ ನೀನೇ ಶಾಮ
ನೀನೇ ಆಲೇ ನೀನೇ ಎಲ್ಲ






Fallow my page for more lyrics

3 comments:

Write Something about PK Music

new1

new2

new5