Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Maastigudi chippinolagade Song lyrics in kannada


ಚಿಪ್ಪಿನೊಳಗಡೆ  ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ
ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ

ಕಣ್ಣ ಮುಂದೆ ಬಂದೆ ನೀನು
ಅಂದೆ ಮೊದಲಾ ಕನಸು ಕಂಡೆ ನಾನು
ಕಣ್ಣ ಮುಂದೆ ಬಂದೆ ನೀನು
ಅಂದೆ ಮೊದಲಾ ಕನಸು ಕಂಡೆ ನಾನು
ಆ ಕನಸಲ್ಲಿ ನಾ ರಾಣಿ ನೀ ರಾಜನು
ನಿನ್ನ ತೋಳಿನ ಅರಮನೆಯಲಿ ನಾನು
ಸಾವು ಕೂಡ ನನ್ನ ನಿನ್ನ
ಬೇರೆ ಮಾಡೋ ಮಾತೆ ಇಲ್ಲ ಇನ್ನ
ನಿನ್ನ ನಗುವಾಗಿ ನೆರಳಾಗಿ ಕಾಪಾಡುವೆ
ಮರಳಿ ಮರಳಿ ಮತ್ತೆ ಜನಿಸಿ ಬರುವೆ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ

ದೂರ ಇನ್ನೂ ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ದೂರ  ಇನ್ನೂ ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಈ ಭುವಿಯಾಚೆ ಕಡಲಾಚೆ ಮುಗಿಲಾಚೆಗೆ
ಪ್ರತಿ ಜನುಮಕು ಜೊತೆ ಬದುಕುವ ಹಾಗೆ
ಸೂರ್ಯ ಚಂದ್ರ ಎರಡು ತಂದು
ನಿನ್ನ ಕಿವಿಗೆ ಇಡುವೆ ಒಡವೆ ಎಂದು
ಈ ಯುಗದಾಚೆ ಜಗದಾಚೆ ಬಾನಾಚೆಗು
ಹುಡುಕಿ ಹುಡುಕಿ ಕೊಡುವೆ ಖುಷಿಯ ತಂದು

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ

1 comment:

Write Something about PK Music

new1

new2

new5