ಚಿತ್ರ: ಬುಲ್ ಬುಲ್
ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ..
ನಿನಗಂತಲೆ ಹುಟ್ಟಿದವ ನಾನೇ ಒಬ್ಬ..
ನೀ ನನ್ನವಳೆನ್ನುವುದೇ ನನಗೆ ಜಂಬ..
ಜೋಪಾನ ಮಾಡುವೆನು ತುಂಬಾ ತುಂಬಾ..
ಜೀವಮಾನವೆಲ್ಲ ನೀಡು ಪ್ರೀತಿ ಸಾಲ..
ಇನ್ನೇನು ಬೇಡ ಇಷ್ಟೇ ಬೇಡಿಕೆ..
ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ..
ನಿನಗಂತಲೆ ಹುಟ್ಟಿದವ ನಾನೇ ಒಬ್ಬ..
ಬಾ ಕೂರು ಹೊರಗೆ.. ಸಮಯ ಹಾಗೆ ಜರುಗಿ..
ಯುಗಾನೆ ಜಗಾನೆ ಕೊನೆಯಾಗೋವರೆಗೆ..
ಇನ್ನೇಕೆ ಒಲವೆ ನಮಗೆ ಬೇರೆ ಗೊಡವೆ..
ಇರೋಣ ಇರೋಣ ಜೊತೆ-ಎಂದು ಹೀಗೆ..
ಮಲಗೋದೆ ಬೇಡಯ್ಯ ರವಿಯೇ ನೀನು..
ದಯಮಾಡಿ ಬರಬೇಡ ಇರುಳೇ ಇನ್ನೂ..
ಈ ಪ್ರೇಮಿಯ ವಿನಂತಿಯ ನೀವ್ ನಡೆಸಿ ಕೊಡುವಿರಾ..
ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ..
ನಿನಗಂತಲೆ ಹುಟ್ಟಿದವ ನಾನೇ ಒಬ್ಬ..
ಆತಂಕ ಸಹಜ ನಿಜ ನಾನೊಬ್ಬ ಮನುಜ..
ತಪ್ಪೇನು ಒಪ್ಪೆನು ನೀನಿರಬೇಡ ದೂರ..
ಈ ಲೋಕದಗಲ ಇರೋ ಸಂತೋಷ ಸಕಲ..
ತರೋದ.. ಇಡೋದ.. ನಿನ್ನ ಪಾದದಡಿಗೆ..
ಒಂದೊಂದು ಹೆಜ್ಜೇನಾ ಇಡಲು ನೀನು..
ಎಂದೆಂದೂ ಕಾವಲಿಗೆ ಇರುವೆ ನಾನು..
ನಿನ್ನ ಹೊಣೆ ನಂದೇ ಕಣೆ ಅದೇನೇ ಆದರೂ..
ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ..
ನಿನಗಂತಲೆ ಹುಟ್ಟಿದವ ನಾನೇ ಒಬ್ಬ..
ನೀ ನನ್ನವಳೆನ್ನುವುದೇ ನನಗೆ ಜಂಬ..
ಜೋಪಾನ ಮಾಡುವೆನು ತುಂಬಾ ತುಂಬಾ..
ಜೀವಮಾನವೆಲ್ಲ ನೀಡು ಪ್ರೀತಿ ಸಾಲ..
ಇನ್ನೇನು ಬೇಡ ಇಷ್ಟೇ ಬೇಡಿಕೆ..
No comments:
Post a Comment
Write Something about PK Music