ಚಿತ್ರ: ಬುಲ್ ಬುಲ್
ಹೇಗಪ್ಪಾ ಕಾಪಾಡಲಿ..
ಚಿನ್ನದಂತಾ ಹುಡುಗ.. ನನ್ನೋನು.. ನನ್ನ ಬಳಗ ಇವನು ಗೊತ್ತೇನು..
ನಂದೇ ದೃಷ್ಟಿ ಏನು..
ಹೇ ಚಿನ್ನ.. ಮುಚ್ಚಿಟ್ಟರು ಬಚ್ಚಿಟ್ಟರು ನಿನ್ನೊಳಗೆ ಹಾಯಾಗಿರುವೇ..
ಹೇ ಚಿನ್ನ.. ನಾನೆಂದಿಗೂ ನಿನ್ನೊಲವಿಗೆ ನಂಬಿಕೆಯ ನೆರಳಾಗಿರುವೆ..
ಬೊಂಬೆಯಂತ ಹುಡುಗಿ ನನ್ನೊಳು.. ಹಾಲು ಜ಼ೀನು ಮನಸು.. ಗೊತ್ತೇನು..
ನಂದೇ ದೃಷ್ಟಿ ಏನು..
ಬಂದೆ ಬರುವ ಎಂದು ಪ್ರೇಮಿಗಾಗಿ ಕಾಯೋ ಆತಂಕ ಹೆಚ್ಚಲ್ಲವ..
ಬಂದ ಮೇಲೆ ಇವನ ತಬ್ಬಿಕೊಂಡ್ರೆ ನನ್ನ ಆಯಸ್ಸು ಹೆಚ್ಚಲ್ಲವ..
ದಿನಾನೂ ಇವನ ಕನಸೇ ಬಂದ್ರೆ ಏನು ಮಾಡಲಿ..
ಅಲ್ಲೂನು ಇವನ ಸ್ಪರ್ಶ ಸುಖವ ಹೇಗೆ ತಾಳಲಿ..
ಓ ಚಿನ್ನ.. ಕನಸಲ್ಲಿಯೂ ನನಸಲ್ಲಿಯೂ ನಿನ್ನ ನೆನಪಲ್ಲೇ ಇರುವೆ..
ಓ ಚಿನ್ನ.. ನಿನ್ನೊಲವಿನ ಮಳೆಬಿಲ್ಲಿಗೆ ರಂಗನ್ನು ತುಂಬಿ ಕೊಡುವೆ..
ಬೊಂಬೆಯಂಥಾ ಹುಡುಗಿ ನನ್ನೊಳು.. ಹಾಲು ಜ಼ೀನು ಮನಸು.. ಗೊತ್ತೇನು..
ನಂದೇ ದೃಷ್ಟಿ ಏನು..
ನನ್ನ ಉಸಿರ ಒಳಗೆ ನಡೆದ ಏರು ಪೇರು ಹೇಳಲು ಆಗುವುದೇ..
ನನ್ನ ಹಣೆಯ ಬೆವರ ಹನಿಯ ಸಾಲು ಕೂಡ ಈವನೆಸರ ಗೀಚುತ್ತಿದೆ..
ಗುಲಾಬಿ ಹೂವ ಸೋಕಿದಂತೆ ನನ್ನ ತಾಕುವ..
ಪ್ರಮಾಣ ಮಾಡಿ ಹೇಳುತೀನಿ ದೇವರೇ ಇವ..
ಓ ಚಿನ್ನ.. ಇಂದಾದರೂ ಮುಂದಾದರು ನಿನ್ನೊಲವಿಗೆ ಉಸಿರಾಗಿರುವೆ..
ಬಾ ಚಿನ್ನ.. ಈ ಜನ್ಮಕು ಮರು ಜನ್ಮಕು ನಿನ್ ಹೆಸರಿಗೆ ಜೊತೆಯಾರಿಗುವೆ..
ಬೊಂಬೆಯಂಥಾ ಹುಡುಗಿ ನನ್ನೊಳು.. ಹಾಲು ಜ಼ೀನು ಮನಸು.. ಗೊತ್ತೇನು..
ನಂದೇ ದೃಷ್ಟಿ ಏನು..
ಕಣ್ಣಲೆ ಬಚ್ಚಿಡಲ .. ನನ್ನಲೇ ಮುಚ್ಚಿಡಲ ..
ಹೇಗಪ್ಪಾ ಕಾಪಾಡಲಿ..
ಚಿನ್ನದಂತಾ ಹುಡುಗ.. ನನ್ನೋನು.. ನನ್ನ ಬಳಗ ಇವನು ಗೊತ್ತೇನು..
ನಂದೇ ದೃಷ್ಟಿ ಏನು..
No comments:
Post a Comment
Write Something about PK Music