ಚಿತ್ರ ಕಳ್ಳ ಕುಳ್ಳ
ಅಮ್ಮಾ…. ಅಮ್ಮಾ....
ಆಹಾ ಆಹಾ ಆಹಾ
ಅಮ್ಮ ಎಂದರೆ ಏನೋ ಹರುಷವು….
ನಮ್ಮ ಪಾಲಿಗೆ ಅವಳೇ ದೈವವು…..
ಅಮ್ಮ ಎಂದರೆ ಏನೋ ಹರುಷವು….
ನಮ್ಮ ಪಾಲಿಗೆ ಅವಳೇ ದೈವವು…..
ಅಮ್ಮ ಎನ್ನಲು ಎಲ್ಲ ಮರೆತೆವು
ಎಂದೂ ಕಾಣದ ಸುಖವ ಕಂಡೆವು
ಅಮ್ಮ ಎಂದರೆ ಏನೋ ಹರುಷವು….
ನಮ್ಮ ಪಾಲಿಗೆ ಅವಳೇ ದೈವವು…..
♫♫♫♫ ♫♫♫♫ ♫♫♫♫ ♫♫♫♫
ನೂರು ನದಿಯು ಸೇರಿ ಹರಿದು ಬಂದರೇನು
ಜನರು ಅದರ ರಭಸ ಕಂಡು ಕಡಲು ಎನ್ನುವರೇನು
ಆಹಾ ಆಆಹಾ ಆಆಹಾ
ಕೋಟಿ ದೇವರೆಲ್ಲ ಕೂಡಿ ನಿಂತರೇನು
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
ಎಂದೋ ಕನಸಲಿ ಕಂಡ ನೆನಪಿದೆ
ಇಂದು ನಿನ್ನ ಕಾಣೋ ಆಸೆ ಎದೆಯ ತುಂಬಿದೆ
ಅಮ್ಮ ಎಂದರೆ ಏನೋ ಹರುಷವು…
ನಮ್ಮ ಪಾಲಿಗೆ ಅವಳೇ ದೈವವು…..
♫♫♫♫ ♫♫♫♫ ♫♫♫♫ ♫♫♫♫
ನನ್ನೀ ವಯಸ್ಸು ಮರೆವೇ ಮಗುವೆ ಆಗಿಬಿಡುವೆ
ಅಮ್ಮ ನಿನ್ನ ಕಂದ ಬಂದೆ ನೋಡು ಎನ್ನುವೆ
ಆಹಾ ಆಆಹಾ ಆಆಹಾ
ನನ್ನೀ ತೋಳಿನಲ್ಲಿ ಅವಳ ಬಳಸಿ ನಲಿವೆ
ಇನ್ನೂ ನಿನ್ನ ಎಂದು ಬಿಟ್ಟು ಇರೆನು ಎನ್ನುವೆ
ತಾಯಿ ಮಡಿಲಲಿ ನಾವು ಹೂಗಳು
ನಮ್ಮ ಬಾಳಿಗೆ ಅವಳೇ ಕಣ್ಗಳು
ಅಮ್ಮ ಎಂದರೆ ಏನೋ ಹರುಷವು….
ನಮ್ಮ ಪಾಲಿಗೆ ಅವಳೇ ದೈವವು…..
ಅಮ್ಮ ಎನ್ನಲು ಎಲ್ಲ ಮರೆತೆವು
ಎಂದೂ ಕಾಣದ ಸುಖವ ಕಂಡೆವು
ಅಮ್ಮ ಎಂದರೆ ಏನೋ ಹರುಷವು….
ನಮ್ಮ ಪಾಲಿಗೆ ಅವಳೇ ದೈವವು…..
ಅಮ್ಮ ಎನ್ನಲು ಎಲ್ಲ ಮರೆತೆವು
ಎಂದೂ ಕಾಣದ ಸುಖವ ಕಂಡೆವು
ಆಹಾಹಾ ಆಹಾಹಾಹಹ
ಆಹಾಹಾ ಆಹಾಹಾಹಹ
No comments:
Post a Comment
Write Something about PK Music