Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ADUVA GOMBE SONG LYRICS - PISU MAATIGE SONG LYRICS ADUVA GOMBE MOVIE SONG LYRICS | ಪಿಸು ಮಾತಿಗೆ, ತುಸು ಸಲಿಗೆಗೆ

FILM: ADUVA GOMBE
LYRICS: KAVIRAJ
SINGER: SHIVA RAJKUMAR, MANASA HOLLA

ಪಿಸು ಮಾತಿಗೆ, ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸು ನಾಚಿಕೆ
ಪಿಸು ಮಾತಿಗೆ, ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸು ನಾಚಿಕೆ
ಎದೆಯ ಒಳಗೆ ಬಿಡದೆ ಬಡಿವ
ಬಡಿತ ನಿನದೆ, ತುಡಿತ ನಿನದೆ
ನಿನ್ನ ನಡಿಗೆ, ನಿನ್ನ ನುಡಿಗೆ ಮರುಳಾದೆನು
ಪಿಸು ಮಾತಿಗೆ, ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸು ನಾಚಿಕೆ
ಪಿಸು ಮಾತಿಗೆ………

ಮೊದಲ ಬಹುಮಾನ ಇನಿಯ ನಿನಗೇನೆ
ಕನಸುಗಳನು ಸೃಜಿಸಿ  ನನಗೆ ಕಳಿಸೋ ಪರಿಗೆ
ನಿನ್ನ ಎದೆಯ ಸೆರೆಮನೆಗೆ ಸೇರಿ ಬಿಡುವೆ ಅಲ್ಲೇ ಇರುವೆ
ಬೇಡ ಬಿಡುಗಡೆಯೇ ಇರುಳು ಕವಿದ
ಹಾದಿಯೊಳಗೆ ದೀಪದಂತೆ ಜೊತೆಗೆ ನೀನು ಬರುತಲಿರುವೆ
ಮನದ ಮನೆಯಂಗಳದಲ್ಲಿ ನಿನಗಾಗಿ ಕಾದಿರುವೆ
ಬಾಳನ್ನು ಬೆಳಗಿಸುವ ಬೆಳಕಾಗಿ ಬಾ
ಮನದ ಮನೆಯಂಗಳದಲ್ಲಿ

ಜನಿಸಿದೆ ಭುವಿಯ ಮೇಲೆ ನಿನ್ನ ಸಲುವಾಗಿ ನಾನು
ತರುವೆನು ಜಗದ ಎಲ್ಲ ಖುಷಿಯ ನಿನಗಾಗಿ ನಾನು
ನೀನೇ ಬೆಳಕು ನೀನೇ ಬದುಕು ನನ್ನ ಚೇತನವೇ
ನೂರು ಜನುಮ ನಿನ್ನ ಸನಿಹ ಹೀಗೆ ನಾನಿರುವೆ
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ಒಲವೆ
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ಒಲವೆ
ನೀನು ತಂದ ಪ್ರೀತಿಯಿಂದ ನಾನೇ ಧನ್ಯನು
ಜೀವಕ್ಕಿಂತ ಜಾಸ್ತಿ ಇನ್ನೂ ನನಗೆ ನೀನು

ಪಿಸು ಮಾತಿಗೆ, ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸು ನಾಚಿಕೆ
ಪಿಸು ಮಾತಿಗೆ………

No comments:

Post a Comment

Write Something about PK Music

new1

new2

new5