Song: Dina heege Jaari hogide
Lyrics: Subraaya Chokkadi
Music: C. Ashwath
Singer: Narasimha Nayak
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ಜತೆ ಇರದ ಬಾಳ ಜಾತ್ರೆಯಲಿ ಸೊಗಸೇನಿದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ಅರಳಿ ಅನೇಕ ಹೂಗಳು ಬರಿದೆ ಕಾದಿವೆ
ಅರಳಿ ಅನೇಕ ಹೂಗಳು, ಅರಳಿ ಅನೇಕ ಹೂಗಳು
ಅರಳಿ ಅನೇಕ ಹೂಗಳು ಬರಿದೆ ಕಾದಿವೆ
ಹಿಮದ ಕಠೋರ ಕೈಯಲಿ ನರಳಿ ಕೆಡೆದಿವೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ಜತೆಯ ಕಾಣದೀಗ ಹಕ್ಕಿ ಅನಾಥವಾಗಿದೆ
ಜತೆಯ ಕಾಣದೀಗ ಹಕ್ಕಿ ಅನಾಥವಾಗಿದೆ
ಋತು ಚೈತ್ರ ಜಾರಿ ಹೋಗಿದೆ
ಋತು ಚೈತ್ರ ಜಾರಿ ಹೋಗಿದೆ, ಗ್ರೀಷ್ಮ ಬರುತಿದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ದುಗುಡ ನಿಧಾನ ಬೆಳೆಯುತ ಬಾಳ ಮುಸುಕಿದೆ
ದುಗುಡ ನಿಧಾನ ಬೆಳೆಯುತ, ದುಗುಡ ನಿಧಾನ ಬೆಳೆಯುತ
ದುಗುಡ ನಿಧಾನ ಬೆಳೆಯುತ ಬಾಳ ಮುಸುಕಿದೆ
ಉಳಿದೇ ನಿತಾಂತ ಕಾಯುತ
ಉಳಿದೇ ನಿತಾಂತ ಕಾಯುತ ಕನಸು ಮಾಸಿದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ಜತೆ ಇರದ ಬಾಳ ಜಾತ್ರೆಯಲಿ ಸೊಗಸೇನಿದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ
No comments:
Post a Comment
Write Something about PK Music