Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Nanna Hrudayava ninage needide Lyrics - C Ashwath songs Lyrics - ನನ್ನ ಹೃದಯವ ನಿನಗೆ ನೀಡಿದೆ

Song: Nanna Hrudayava ninage needide
Lyrics:B.R Lakshman Rao
Music/ Singer: C. Ashwath

ನನ್ನ ಹೃದಯವ ನಿನಗೆ ನೀಡಿದೆ
ಒಲವೊಂದೇ ನಿನ್ನಿಂದ ಬಯಸಿದೆ
ತಪ್ಪೆಲ್ಲ ನನ್ನದೇ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ
ನನ್ನ ಹೃದಯವ ನಿನಗೆ ನೀಡಿದೆ
ಒಲವೊಂದೇ ನಿನ್ನಿಂದ ಬಯಸಿದೆ
ತಪ್ಪೆಲ್ಲ ನನ್ನದೇ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ

ಏಕೆ ನೆನಪಾಗಿ ಕಾಡುವೆ, ಬಿಡು ನನ್ನನ್ನು ನನ್ನ ಪಾಡಿಗೆ
ಏಕೆ ನೆನಪಾಗಿ ಕಾಡುವೆ, ಬಿಡು ನನ್ನನ್ನು ನನ್ನ ಪಾಡಿಗೆ
ಹೃದಯದ ಹಸಿ ಗಾಯವ
ಹೃದಯದ ಹಸಿ ಗಾಯವ
ಹೊಲೆಯುವೆ ಮರೆವಿನ ಸೂಜಿಯಲಿ
ದಾರದಲಿ ಸೂಜಿಯಲಿ ದಾರದಲಿ

ನನ್ನ ಹೃದಯವ ನಿನಗೆ ನೀಡಿದೆ
ಒಲವೊಂದೇ ನಿನ್ನಿಂದ ಬಯಸಿದೆ
ತಪ್ಪೆಲ್ಲ ನನ್ನದೇ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ

ಗಾಯವೆಲ್ಲ ಗುಣವಾದರೂ, ಗುರುತು ಮಾಸದೇ ಉಳಿವುದು
ಗಾಯವೆಲ್ಲ ಗುಣವಾದರೂ, ಗುರುತು ಮಾಸದೇ ಉಳಿವುದು
ಪ್ರೀತಿಗೆ ನಿನ್ನ ಕಾಣಿಕೆ, ಪ್ರೀತಿಗೆ ನಿನ್ನ ಕಾಣಿಕೆ
ಇದೆಂದೇ ನಾ ತಿಳಿಯುವೆ
ವಂದನೆ ಸಲಿಸುವೆ, ವಂದನೆ ಸಲಿಸುವೆ

ನನ್ನ ಹೃದಯವ ನಿನಗೆ ನೀಡಿದೆ
ಒಲವೊಂದೇ ನಿನ್ನಿಂದ ಬಯಸಿದೆ
ತಪ್ಪೆಲ್ಲ ನನ್ನದೇ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ

ಯಾರು ಸಾಕ್ಷಿ ನಿನ್ನ ದ್ರೋಹಕೆ, ಅಂತರಾತ್ಮ ನಿನಗಿದ್ದರೆ
ಯಾರು ಸಾಕ್ಷಿ ನಿನ್ನ ದ್ರೋಹಕೆ, ಅಂತರಾತ್ಮ ನಿನಗಿದ್ದರೆ
ನೋಯುವೆ ನೀನು ಬೇಯುವೆ
ನೋಯುವೆ ನೀನು ಬೇಯುವೆ, ಸಂತಾಪದುರಿಯಲಿ
ಆಳದ ನಿಜದಲಿ, ಆಳದ ನಿಜದಲಿ

ನನ್ನ ಹೃದಯವ ನಿನಗೆ ನೀಡಿದೆ
ಒಲವೊಂದೇ ನಿನ್ನಿಂದ ಬಯಸಿದೆ
ತಪ್ಪೆಲ್ಲ ನನ್ನದೇ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ
ಇಬ್ಬನಿ ಮಣಿಯನು ಮುತ್ತೆಂದು ನಾ ಭ್ರಮಿಸಿದೆ

No comments:

Post a Comment

Write Something about PK Music

new1

new2

new5