Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Swaarthadinda badukodu byada manusa Lyrics - Iruvudonde janma song Lyrics - ಸ್ವಾರ್ಥದಿಂದ ಬದುಕೋದು ಬ್ಯಾಡ ಮನುಸ - ಇರುವುದೊಂದೇ ಜನ್ಮ ನೀ ಸಹಾಯ ಮಾಡು ತಮ್ಮ


Song: Swaarthadinda badukodu byada manusa
Lyrics: Num Rushi
Music: Abhiman Roy
Singer : Lahari Velu

ಸ್ವಾರ್ಥದಿಂದ ಬದುಕೋದು ಬ್ಯಾಡ ಮನುಸ
ಬದುಕೋದಿಲ್ಲ ನಾವಿಲ್ಲಿ ಕೋಟಿ ವರುಸ
ಸ್ವಾರ್ಥದಿಂದ ಬದುಕೋದು ಬ್ಯಾಡ ಮನುಸ
ಬದುಕೋದಿಲ್ಲ ನಾವಿಲ್ಲಿ ಕೋಟಿ ವರುಸ
ಮಾನವನಿಗೆ ಮಾನವನೇ ನೆರವು ನೀಡಬೇಕು
ಪ್ರೀತಿ ಇಂದ ಜಗವನು ನಾವು ಕಟ್ಟಬೇಕು
ಪುಣ್ಯ ಕಣೋ ಮಾನವ ಜನ್ಮ
ಶ್ರೇಷ್ಟ ಕಣೋ ಮಾನವ ಜನ್ಮ
ಸಹಾಯ ಮಾಡುವುದೇ ದೊಡ್ಡ ಧರ್ಮ
ಸಹಾಯ ಮಾಡುವುದೇ ದೊಡ್ಡ ಧರ್ಮ
ಇರುವುದೊಂದೇ ಜನ್ಮ
ನೀ ಸಹಾಯ ಮಾಡು ತಮ್ಮ
ಇರುವುದೊಂದೇ ಜನ್ಮ
ನೀ ಸಹಾಯ ಮಾಡು ತಮ್ಮ

ಯಾರಿಗೆ ಯಾರು ಇಲ್ಲ ಎಂಬ
ಮಾತು ನಿಜವೇನಲ್ಲ
ಯಾರಿಗೆ ಯಾರು ಇಲ್ಲ ಎಂದರೆ ಲೋಕವೇ ಇಲ್ಲ
ದೇವರು ಎದುರಿಗೆ ಬಂದು
ನಿನಗೆ ಏನು ನೀಡೋದಿಲ್ಲ
ಕಷ್ಟದಲ್ಲಿ ಕೈ ಹಿಡಿದವನ
ದೇವರೆಂದರೆ ತಪ್ಪಿಲ್ಲ
ತಾಯಿಯ ಗರ್ಭದಲ್ಲೇ ಇರುವಾಗ ನೀನು
ಪ್ರೀತಿಯ ನಾಮವನು
ಕಲಿತುಕೊಂಡೆ ಬಂದಿರುವೆ
ಪ್ರೀತಿಯ ಹಂಚು ಜಗಕ್ಕೆಲ್ಲ
ಪ್ರೀತಿಯ ಮುಂದೆ ಏನಿಲ್ಲ
ಪ್ರೀತಿಯ ಹಂಚು ಜಗಕ್ಕೆಲ್ಲ
ಪ್ರೀತಿಯ ಮುಂದೆ ಏನಿಲ್ಲ
ಇರುವುದೊಂದೇ ಜನ್ಮ
ನೀ ಸಹಾಯ ಮಾಡು ತಮ್ಮ
ಇರುವುದೊಂದೇ ಜನ್ಮ
ನೀ ಸಹಾಯ ಮಾಡು ತಮ್ಮ

ಮಹಡಿ ಮೇಲೆ ಮಹಡಿ ಕಟ್ಟಿ
ಬಾನಿಗೇಣಿ ಹಾಕಬೇಡ
ಏಳು ಲೋಕ ನಿನಗೆ ಬೇಕು
ಎಂದು ನೀನು ಎಗರಬೇಡ
ಬಂಧು ಬಳಗ ಸ್ನೇಹಿತರನ್ನು
ಕೀಳಾಗಿ ಕಾಣಬ್ಯಾಡ
ನಿನಗೆ ಒಳಿತು ಮಾಡಿದವರ
ಎಂದು ನೀನು ಮರೆಯಬ್ಯಾಡ
ಸೃಷ್ಟಿ ಒಮ್ಮೆ ಮುನಿಸಿಕೊಂಡರೆ
ನೀನೇ ಕೊಚ್ಚಿ ಹೋಗುವೆ ಮೂಢ
ನೀನೇ ಇಲ್ಲವಾಗುವ ಮುಂಚೆ
ಎಲ್ಲರಂತೆ ಬಾಳಿ ನೋಡ
ಎಲ್ಲರೂ ನಿನ್ನಂತೆ ಎಂದು
ನೀನು ತಿಳಿದು ಬಾಳಯ್ಯ
ಸಾಯುವ ಮುಂಚೆ ಸಹಾಯವನ್ನು
ಯಾರಿಗಾದರೂ ಮಾಡಯ್ಯ
ಇರುವುದೊಂದೇ ಜನ್ಮ
ನೀ ಸಹಾಯ ಮಾಡು ತಮ್ಮ
ಇರುವುದೊಂದೇ ಜನ್ಮ
ನೀ ಸಹಾಯ ಮಾಡು ತಮ್ಮ

ಸ್ವಾರ್ಥದಿಂದ ಬದುಕೋದು ಬ್ಯಾಡ ಮನುಸ
ಬದುಕೋದಿಲ್ಲ ನಾವಿಲ್ಲಿ ಕೋಟಿ ವರುಸ
ಸ್ವಾರ್ಥದಿಂದ ಬದುಕೋದು ಬ್ಯಾಡ ಮಾನುಸ
ಬದುಕೋದಿಲ್ಲ ನಾವಿಲ್ಲಿ ಕೋಟಿ ವರುಸ
ಮಾನವನಿಗೆ ಮಾನವನೇ ನೆರವು ನೀಡಬೇಕು
ಪ್ರೀತಿ ಇಂದ ಜಗವನು ನಾವು ಕಟ್ಟಬೇಕು
ಪುಣ್ಯ ಕಣೋ ಮಾನವ ಜನ್ಮ
ಶ್ರೇಷ್ಟ ಕಣೋ ಮಾನವ ಜನ್ಮ
ಸಹಾಯ ಮಾಡುವುದೇ ದೊಡ್ಡ ಧರ್ಮ
ಸಹಾಯ ಮಾಡುವುದೇ ದೊಡ್ಡ ಧರ್ಮ
ಇರುವುದೊಂದೇ ಜನ್ಮ
ನೀ ಸಹಾಯ ಮಾಡು  ತಮ್ಮ
ಇರುವುದೊಂದೇ ಜನ್ಮ 
ನೀ ಸಹಾಯ ಮಾಡು ತಮ್ಮ



No comments:

Post a Comment

Write Something about PK Music

new1

new2

new5