Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಹುಚ್ಚು ಕೋಡಿ ಮನಸು - Hucchu kodi manasu Song Lyrics in kannada - MD Pallavi

Song: Hucchu kodi manassu
Singer: M D Pallavi
Lyrics: H S Venkateshmurthy

ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು
ಮಾತು ಮಾತಿಗೇಕೊ ನಗು
ಮರು ಗಳಿಗೆಯೇ ಮೌನ
ಮಾತು ಮಾತಿಗೇಕೊ ನಗು
ಮರು ಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ

ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು

ಸೆರಗು ತೀಡಿದಷ್ಟು ಸುಕ್ಕು
ಹಟ  ಮಾಡುವ  ಕೂದಲು
ನೀರಿ ಏಕೋ ಸರಿಯಾಗದು
ಮತ್ತೆ  ಒಳಗೆ ಹೋದಳು
ಸೆರಗು ತೀಡಿದಷ್ಟು ಸುಕ್ಕು
ಹಟ  ಮಾಡುವ  ಕೂದಲು
ನೀರಿ ಏಕೋ ಸರಿಯಾಗದು
ಮತ್ತೆ  ಒಳಗೆ ಹೋದಳು
ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು

ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ  ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ  ರಂಗು ಹೆಚ್ಚೇ
ನಗುತ ಅವಳ ಛೇಡಿಸುತಿದೆ
ಗಲ್ಲದ ಕರಿ ಮಚ್ಚೆ
ನಗುತ ಅವಳ ಛೇಡಿಸುತಿದೆ
ಗಲ್ಲದ ಕರಿ ಮಚ್ಚೆ

ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು

ಬರಿ ಹಸಿರು ಬರಿ ಹೂವು
ಎದೆಯಲೇಷ್ಟೋ ಹೆಸರು
ಯಾವ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು
ಬರಿ ಹಸಿರು ಬರಿ ಹೂವು
ಎದೆಯಲೇಷ್ಟೋ ಹೆಸರು
ಯಾವ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು

ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು
ಮಾತು ಮಾತಿಗೇಕೊ ನಗು
ಮರು ಗಳಿಗೆಯೇ ಮೌನ
ಮಾತು ಮಾತಿಗೇಕೊ ನಗು
ಮರು ಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ


No comments:

Post a Comment

Write Something about PK Music

new1

new2

new5