Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಬಂಗಾರ ಕಿರಣವ - Bangaara Kiranava Chelluta Bhaskara Song Lyrics in Kannada - Sugura Sirigandha

ಸೂಗೂರ ಸಿರಿಗಂಧ

ಸಂಗೀತ: M S ಮಾರುತಿ

ಸಾಹಿತ್ಯ: ಶ್ರೀ H Kakaragal

ಗಾಯನ: ನಂದಿತಾ, ಚಂದ್ರಿಕ ಗುರುರಾಜ್


ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ಇಕ್ಕಲಿ ಹೂವು ಮೊಗ್ಗುಗಳರಳಿ

ನಿನ್ನಯ ಚರಣವ ಸೇರಲೆಂದು

ಕಾತುರದಿಂದ ಕಾದಿವೆ ಸೂಗೂರ

ವೀರನೆ ಸ್ವೀಕರಿಸೇಳಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ತಂಗಾಳಿ ಹೊತ್ತು ತರುತಿದೆ ನಿನ್ನೆಡೆ

ಹಕ್ಕಿಗಳ ಚಿಲಿಪಿಲಿ ಹಾಡು

ಇಂಪಾದ ಮಧುರ ನಾದವ ಕೇಳಲು

ಸೂಗೂರ ವೀರನೇ ಏಳಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ಕೃಷ್ಣ ಭೀಮೆ ಸಂಗಮದಲೆಗಳು

ಜುಳು ಜುಳು ಎಂದು ಜಪಿಸುತಿವೆ

ನಿನ್ನಯ ನಾಮದ ಮಂತ್ರವೆ ಹೇಳುತ

ಸಂತಸದಿಂದ ಹರಿಯುತಿವೆ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ಮೂಡಣದ ಹೊಂಬೆಳಕು ಹರಿದಿಹುದೋ

ಸೂಗೂರೇಶ್ವರ ಏಳಯ್ಯ

ಭಕ್ತರೆಲ್ಲರೂ ನಿನ್ನ ದರುಶನಕೆ

ಕಾಯುತ ನಿಂತಿಹರೇಳಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ಕೈಯ್ಯಲ್ಲಿ ಕಾಯಿ ಕರ್ಪೂರ ಪಿಡಿದು

ಮನದಲಿ ನಿನ್ನನು ಸ್ಮರಿಸುತಲಿ

ನಿಂತಿಹ ಭಕ್ತರ ಸಂಭ್ರಮ ನೋಡಲು

ಬೇಗನೆ ನೀನು ಏಳಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ನಮ್ಮಯ ಭಾಗ್ಯದ ದೈವವು ನೀನು

ನಿನ್ಯ ಕೃಪೆಯ ಬೇಡುತಲಿ

ದೇವ ನಿನ್ನ ಚರಣವ ಪಿಡಿಯಲು

ಮಡಿಯಲಿ ಬಂದು ನಿಂತಿಹೆವು

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ಶಿಷ್ಟ ರಕ್ಷಕ ದುಷ್ಟ ಸಂಹಾರಕ

ಸೂಗೂರ ವೀರನೇ ಏಳಯ್ಯ

ಭಕ್ತಕೋಟಿಗೆ ದರುಶನ ನೀಡಿ

ಈ ಜಗವನು ಉದ್ದರಿಸಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ನಸುಕಲಿ ಎದ್ದು ನಿನ್ನಯ ಪೂಜೆಗೆ

ಕೃಷ್ಣ ಜಲವನು ತಂದಿಹೆವು

ತಂದೆ ನಿನಗಭಿಷೇಕವ ಮಾಡಿ

ಪಾವನರಾಗಲು ನಿಂತಿಹೆವು

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

♫♫♫♫♫♫♫♫♫♫♫♫


ಅನವ್ರತ ನಾವು ನಿನ್ನಯ ಸ್ಮರಿಸಲು

ಮರೆಯದೆ ನೀನಮ್ಮುನು ಕಾಯೊ

ಕರುಣಾಸಿಂಧು ಸೂಗೂರ ವೀರನೇ

ನಿನ್ನಯ ದರುಶನ ನೀಡಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

ಬಂಗಾರ ಕಿರಣವ ಚೆಲ್ಲುತ ಭಾಸ್ಕರ

ಭುವಿಯನ್ನು ಬೆಳಗಲು ಬಂದನಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

ಬೆಳಗಾಯಿತು ಸೂಗೂರೇಶ್ವರನೇ

ಸುಪ್ರಭಾತವು ನಿನಗೆ ಕೇಳಯ್ಯ

No comments:

Post a Comment

Write Something about PK Music

new1

new2

new5