Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನೀನಿಟ್ಟ ವರವಲ್ಲವೇ - Neenitta Varavallave Song Lyrics


Jeevana Darshana

Sri Dingaleshwara Pravachana

  

ನೀನಿಟ್ಟ ವರವಲ್ಲವೇ

ಓ ಸ್ವಾಮಿ ಈ ಹೂವು ಹಣ್ಣುಗಳು

ನೀನಿಟ್ಟ ವರವಲ್ಲವೇ

ಓ ಸ್ವಾಮಿ ಈ ನಮ್ಮ ಕಣ್ಣುಗಳು

ಈ ಭೂಮಿ ಈ ಬಾನು

ಈ ದೇಹ ಈ ಪ್ರಾಣ

ಎಲ್ಲಾವು ನಿನದಲ್ಲವೇ..

ನೀನಿಟ್ಟ ವರವಲ್ಲವೇ

ಓ ಸ್ವಾಮಿ ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಪಂಪಾ ನದಿಯ ನೀರು

ಅಲೆಯಲ್ಲ ನಿನ್ನದು

ತಂಪಾಗಿ ಸುರಿಯುವ

ಮಳೆಯಲ್ಲ ನಿನ್ನದು

ಪಂಪಾ ನದಿಯ ನೀರು

ಅಲೆಯಲ್ಲ ನಿನ್ನದು

ತಂಪಾಗಿ ಸುರಿಯುವ

ಮಳೆಯಲ್ಲ ನಿನ್ನದು

ಈ ಗಾಳಿ ಈ ನೀರು

ಆ ಮೋಡ ಆ ಮುಗಿಲು

ಎಲ್ಲಾವೂ ನಿನದಲ್ಲವೇ

ನೀನಿಟ್ಟ ವರವಲ್ಲವೇ

ಓ ಸ್ವಾಮಿ ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಗಿಳಿಯ ಕೋಗಿಲೆಗಳ

ಸ್ವರವೆಲ್ಲಾ ನಿನ್ನದು

ಪಂಚವಾಧ್ಯ ಮೇಳ

ಲಯವೆಲ್ಲಾ ನಿನ್ನದು

ಗಿಳಿಯ ಕೋಗಿಲೆಗಳ

ಸ್ವರವೆಲ್ಲಾ ನಿನ್ನದು

ಪಂಚವಾಧ್ಯ ಮೇಳ

ಲಯವೆಲ್ಲಾ ನಿನ್ನದು

ಈ ರಾಗ ಈ ತಾಳ

ಈ ಹಾಡು ಈ ಇಂಪು

ಎಲ್ಲಾವೂ ನಿನದಲ್ಲವೇ

ನೀನಿಟ್ಟ ವರವಲ್ಲವೇ

ಓ ಸ್ವಾಮಿ ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಮಿನಗುವ ಚುಕ್ಕೆಯ

ಹೊಳಪೆಲ್ಲಾ ನಿನ್ನದು

ಕಾಮನಬಿಲ್ಲಿನ

ಬಣ್ಣವು ನಿನ್ನದು

ಮಿನಗುವ ಚುಕ್ಕೆಯ

ಹೊಳಪೆಲ್ಲಾ ನಿನ್ನದು

ಕಾಮನಬಿಲ್ಲಿನ

ಬಣ್ಣವು ನಿನ್ನದು

ಆ ಸೂರ್ಯ ಆ ಚಂದ್ರ

ಈ ರಾತ್ರಿ ಈ ಹಗಲು

ಎಲ್ಲಾವೂ ನಿನದಲ್ಲವೇ

ನೀನಿಟ್ಟ ವರವಲ್ಲವೇ

ಓ ಸ್ವಾಮಿ ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಈ ನಮ್ಮ ನರಜನ್ಮ

ನೀಕೊಟ್ಟ ವರವು

ಸರ್ವಾಂಗ ಚೇತನ

ನೀನಿಟ್ಟ ಒಲವು

ಈ ನಮ್ಮ ನರಜನ್ಮ

ನೀಕೊಟ್ಟ ವರವು

ಸರ್ವಾಂಗ ಚೇತನ

ನೀನಿಟ್ಟ ಒಲವು

ಈ ತನವು ಈ ಮನವು

ಈ ಭಕ್ತಿ ಆ ಮುಕ್ತಿ

ಎಲ್ಲಾವೂ ನಿನದಲ್ಲವೇ

ನೀನಿಟ್ಟ ವರವಲ್ಲವೇ

ಓ ಸ್ವಾಮಿ ಈ ಹೂವು ಹಣ್ಣುಗಳು

ಈ ನಮ್ಮ ಕಣ್ಣುಗಳು

ಈ ನಮ್ಮ ಕಣ್ಣುಗಳು

No comments:

Post a Comment

Write Something about PK Music

new1

new2

new5