Lyrics: H S Venkateshmurthy
Music: Raghavendra beejadi
singer : Raghavendra beejadi
ಇರಬೇಕು ಇರುವಂತೆ
ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಇರಬೇಕು ಇರುವಂತೆ
ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
♫♫♫♫♫♫♫♫♫♫♫♫
ತನ್ನೊಡಲ ತಾರೆಗಳ
ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ
ಬಾನಿಗುರುಳು ಬಿಟ್ಟು
ತನ್ನೊಡಲ ತಾರೆಗಳ
ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ
ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ
ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ
ಕರುಣೆಯಿಟ್ಟು
ಹೇಗೆ ಮರೆಯಾಗುವುದೊ
ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ
ಕರುಣೆಯಿಟ್ಟು
ಹಾಗೆ ಬಾಳಿಸು ಗುರುವೆ
ಕರುಣೆಯಿಟ್ಟು
ತಾನು ಬಿಸಿಲಲಿ ನಿಂತು
ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ತಾನು ಬಿಸಿಲಲಿ ನಿಂತು
ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ
ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು
ಹೇಗೆ ಗೆಲುವಾಗುವುದೋ
ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು
ಇರಬೇಕು ಇರುವಂತೆ
ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
♫♫♫♫♫♫♫♫♫♫♫♫
ತಾನು ಕೆಸರಲಿ
ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ತಾನು ಕೆಸರಲಿ
ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನ್ನು
ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ
ಕರುಣೆಯಿಟ್ಟು
ಹೇಗೆ ತಾಯ್ತನವನ್ನು
ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ
ಕರುಣೆಯಿಟ್ಟು
ಹಾಗೆ ಬಾಳಿಸು ಗುರುವೆ
ಕರುಣೆಯಿಟ್ಟು
ದಾರಿಯುದ್ದಕೂ ಪೈರು
ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ
ತುಂಬಿ ನದಿಯು
ದಾರಿಯುದ್ದಕೂ ಪೈರು
ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ
ತುಂಬಿ ನದಿಯು
ಹೇಗೆ ದೂರದ ನೀಲಿಯಲ್ಲಿ
ಕೊನೆಗೊಳ್ಳುವುದೋ…
ಹೇಗೆ ದೂರದ ನೀಲಿಯಲ್ಲಿ
ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು
ಹೇಗೆ ದೂರದ ನೀಲಿಯಲ್ಲಿ
ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು
ಇರಬೇಕು ಇರುವಂತೆ
ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಇರಬೇಕು ಇರುವಂತೆ
ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
ಮಳೆ ಸುರಿಸಿ ಹಗುರಾದ
ಮುಗಿಲಿನಂತೆ
No comments:
Post a Comment
Write Something about PK Music