ಗಣಪತಿ ಸಂಕಷ್ಟ ಸ್ತುತಿ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ
ಗಾಯಕರು: ಲತಾ ಹಂಸಲೇಖ
ಕಡುಬಿಗೆ ತುಪ್ಪ ಹಾಕಿದೆನಪ್ಪಾ
ಸ್ವೀಕರಿಸಪ್ಪಾ ಓ ಬೆನಕಪ್ಪಾ
ಕಡುಬಿಗೆ ತುಪ್ಪ ಹಾಕಿದೆನಪ್ಪಾ
ಸ್ವೀಕರಿಸಪ್ಪಾ ಓ ಬೆನಕಪ್ಪಾ
ಸಾವಿರ ತಪ್ಪಾ ಮನ್ನಿಸಯಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
ಕಡುಬಿಗೆ ತುಪ್ಪ ಹಾಕಿದೆನಪ್ಪಾ
ಸ್ವೀಕರಿಸಪ್ಪಾ ಓ ಬೆನಕಪ್ಪಾ
♫♫♫♫♫♫♫♫♫♫♫♫
ಮೂಡಣದಲ್ಲಿ ದಿನಕರ ಬರುವ
ಶುಭಕರ ವೇಳೆ
ಪರಿಮಳ ಚೆಲ್ಲುವ ಮಲ್ಲಿಗೆ
ಸಂಪಿಗೆ ಹೂಗಳ ಮಾಲೆ
ತಂದಿರುವೆ ನಿನಗಾಗಿ
ನಮಿಸಿರುವೆ ತಲೆಬಾಗಿ ಬಾರಪ್ಪಾ
ಬಾಗಿಲಿಗಪ್ಪ ತೋರಣವಪ್ಪಾ
321
ನೀ ಬರಲೆಂಬ ಕಾರಣವಪ್ಪಾ
ಬಾಗಿಲಿಗಪ್ಪ ತೋರಣವಪ್ಪಾ
ನೀ ಬರಲೆಂಬ ಕಾರಣವಪ್ಪಾ
ಗಂಧವೇ ಕಪ್ಪ ಕಾಣಿಕೆಯಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ.
ಓಗೊಡು ನೀ ಗಣಪತಿ ಬಪ್ಪಾ
ಕಡುಬಿಗೆ ತುಪ್ಪ ಹಾಕಿದೆನಪ್ಪಾ
ಸ್ವೀಕರಿಸಪ್ಪಾ ಓ ಬೆನಕಪ್ಪಾ
♫♫♫♫♫♫♫♫♫♫♫♫
ಹುಣ್ಣಿಮೆ ಕಳೆದು ಮೂರನೇ
ದಿವಸ ಕಾಯುವೆವಪ್ಪಾ
ತಿಂಗಳು ತಿಂಗಳು
ಸಂಕಷ್ಟಸ್ತುತಿ ಮಾಡುವೆವಪ್ಪಾ
ಗಣಪನಾ ನಾಮ ಹೊತ್ತು
ಉಣುವೆವು ಒಂದೇ ಹೊತ್ತು
ಬಾರಪ್ಪಾ
ಅಂಗೈದಪ್ಪ ಹೋಳಿಗೆಯಪ್ಪಾ
ಹೋಳಿಗೆಗಪ್ಪಾ ಹಾಲಿದೆಯಪ್ಪಾ
ಅಂಗೈದಪ್ಪ ಹೋಳಿಗೆಯಪ್ಪಾ
ಹೋಳಿಗೆಗಪ್ಪಾ ಹಾಲಿದೆಯಪ್ಪಾ
ಸಾವಿರ ತಪ್ಪಾ ಮನ್ನಿಸಯಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
ಕಡುಬಿಗೆ ತುಪ್ಪ ಹಾಕಿದೆನಪ್ಪಾ
ಸ್ವೀಕರಿಸಪ್ಪಾ ಓ ಬೆನಕಪ್ಪಾ
♫♫♫♫♫♫♫♫♫♫♫♫
ಮನೆಯ ಮಕ್ಕಳು ಓದಲು
ಬರೆಯಲು ಮನಸು ಕೊಡಪ್ಪಾ
ಮನದಲಿ ಶಾಂತಿಯು ಸುಖವು
ನೆಲೆಸಲು ಪ್ರೀತಿ ಕೊಡಪ್ಪಾ
ಧನ ಮದ ಬೇಡವಪ್ಪಾ
ಮನ ಮುದ ಮಾಡು
ಅಪ್ಪಾ ನಮ್ಮಪ್ಪಾ
ಕಡುಬಿಗೆ ತುಪ್ಪ ಹಾಕಿದೆಯಪ್ಪಾ
ಸ್ವೀಕರಿಸಪ್ಪಾ ಓ ಬೆನಕಪ್ಪಾ
ಕಡುಬಿಗೆ ತುಪ್ಪ ಹಾಕಿದೆನಪ್ಪಾ
ಸ್ವೀಕರಿಸಪ್ಪಾ ಓ ಬೆನಕಪ್ಪಾ
ಸಾವಿರ ತಪ್ಪಾ ಮನ್ನಿಸಯಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡುವೋ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
ಓಗೊಡು ನೀ ಗಣಪತಿ ಬಪ್ಪಾ
No comments:
Post a Comment
Write Something about PK Music