Movie - AK 47
Singer - S P B
Music - Hamsalekha
Lyrics – Hamsalekha
ಓ ಮೈ
ಸನ್
ಅಮ್ಮನ ಆಸೆಯ ಆರತಿ
ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು
ಓ ಮೈ
ಸನ್
ಅಮ್ಮನ ಆಸೆಯ ಆರತಿ
ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು
♫♫♫♫♫♫♫♫♫♫♫♫
ಯಾರು ಹೆತ್ತರಯ್ಯ
ಇಂತ ಕಂದನನ್ನು
ಅಂತ ಲೋಕ
ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ
ಕಳಶವಾಗು
ವಿದ್ಯೆ ಎಂಬ ಖಡ್ಗ
ಒಂದು
ತಂದೆ ಕೊಡುಗೆ
ವಿನಯ ಎಂಬ ಅಸ್ತ್ರ
ಒಂದು
ತಾಯ ಕೊಡುಗೆ
ಧ್ರೋಹಿ ಎಂಬ
ಪಟ್ಟದಿಂದ ದೂರವಾಗು
ಕೋಪವೆ ಹಿಂಸೆಗೆ ಕಾರಣ
ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು
ಓಂ ಸಹನ ಭವತು
ಜಪಿಸು
ಓ ಮೈ
ಸನ್
ಅಮ್ಮನ ಆಸೆಯ ಆರತಿ
ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು
♫♫♫♫♫♫♫♫♫♫♫♫
ನಿನ್ನ ಬಾಳಿಗೊಂದು
ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ
ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ
ನೀ ಸಾಗು
ನಿನಗೆ ಮಾತ್ರವಲ್ಲ
ನಿನಗಾಗೊ ನೋವು
ಪಾಲುದಾರರಯ್ಯ
ನೋವಿನಲ್ಲು ನಾವು
ನೋವು ನೀಡದಂತೆ
ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು
ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು
ಓಂ ಶಾಂತಿ ಶಾಂತಿ
ಜಪಿಸು
ಓ ಮೈ
ಸನ್
ಕನ್ನದ ತಾಯಿಗೆ ಆರತಿ
ಆದೆ
ಭಾರತ ಮಾತೆಯ ಕೀರುತಿ
ಆದೆ
ನಾಡೆಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ
♫♫♫♫♫♫♫♫♫♫♫♫
ನನ್ನ ಮನೆ ನನ್ನ
ಮಗ
ಅಂದೆ ನಾನು
ನಮ್ಮ ನಾಡೆ ನನ್ನ
ಮನೆ
ಅಂದೆ ನೀನು
ನಿನ್ನ ಮನೆಯಲ್ಲಿ
ನೀ ಚಿರಾಯು ಆದೆ
ಹಿಂಸೆಯನ್ನು ಸಹಿಸಬೇಕು
ಅಂದೆ ನಾನು
ಸಹಿಸುವುದೆ ಅಪರಾಧ
ಎಂದೆ ನೀನು
ಒಪ್ಪಿಕೊಂಡೆ ಕಿರಿಯರಿಗೆ
ಗುರುವಾದೆ
ಸಾವಿರ ಎರಡು ಸಾವಿರ
ವರ್ಷದ ಮಹಾಮನ್ವಂತರ
ಈ ಧರೆಯು
ಕಾಣಲಿದೆ
ಅಲ್ಲಿ ನಿನ್ನ ಮಾತು
ಫಲಿಸಲಿದೆ
ಓ ಮೈ
ಸನ್
ಕನ್ನಡ ತಾಯಿಗೆ ಆರತಿ
ಆದೆ
ಭಾರತ ಮಾತೆಯ ಕೀರುತಿ
ಆದೆ
ನಾಡೆ.ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ
No comments:
Post a Comment
Write Something about PK Music