ಚಿತ್ರ: ಮಸಣದ ಹೂವು
ಗಾಯಕ: ಎಸ್.ಪಿ.ಬಾಲು
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ವಿಜಯ ನರಸಿಂಹ
ನೀನೇಕೆ ಕೊರಗುವೆ
ಮಸಣದ ಹೂವೆಂದು
ನೀನೇಕೆ ಕೊರಗುವೆ
ಮಸಣದ ವಾಸಿಯೂ
ಮಹದೇವನಲ್ಲವೇ
ಮಸಣದ ವಾಸಿಯೂ
ಮಹದೇವನಲ್ಲವೇ
ಮಸಣದ ಹೂವೆಂದು
ನೀನೇಕೆ ಕೊರಗುವೆ
♬♬♬♬♬♬♬♬♬♬♬♬
ಭೂದಿಯ ಬಳಿದ ಆ ಶಿವಗೆ
ಎಲ್ಲರ ಭಕ್ತಿಯ ಪೂಜೆ
ಭೂದಿಯ ಬಳಿದ ಆ ಶಿವಗೆ
ಎಲ್ಲರ ಭಕ್ತಿಯ ಪೂಜೆ
ಬೀದಿಗೆ ಬಿಸುಡಿದ ನನ್ನ ಗೌರಿಗೆ
ನನ್ನೆದೆ ಪ್ರೀತಿಯ ಪೂಜೆ
ಮುಗಿಯ ಕೂಡದು ನಿನ್ನ ಕಥೆ
ದುರಂತದಲ್ಲಿ.. ದುರಂತದಲ್ಲಿ..
ನೀನೇಕೆ ಕೊರಗುವೆ
ಮಸಣದ ವಾಸಿಯೂ
ಮಹದೇವನಲ್ಲವೇ
♬♬♬♬♬♬♬♬♬♬♬♬
ನನ್ನ ನಿನ್ನ ಹೂವಿನ ತೋಟ
ಎಂದು ಬಾಡದಿರಲಿ
ನನ್ನ ನಿನ್ನ ಹೂವಿನ ತೋಟ
ಎಂದು ಬಾಡದಿರಲಿ
ಹೂವಿಗೆ ನಾ ನಾ ದುಂಬಿಯ ಕಾಟ
ಎಂದು ಬಾರದಿರಲಿ
ನಮ್ಮ ಪ್ರೀತಿಯ ಪುಟ್ಟ ಗುಡಿಯು
ಬೆಟ್ಟದ ಮೇಲಿರಲಿ..
ನೀನೇಕೆ ಕೊರಗುವೆ
ಮಸಣದ ವಾಸಿಯೂ
ಮಹದೇವನಲ್ಲವೇ
♬♬♬♬♬♬♬♬♬♬♬♬
ನನ್ನ ನಿನ್ನ ಬಾಳ ದೋಣಿ
ಒಂದೇ ತೀರ ಸೇರಲಿ
ನನ್ನ ನಿನ್ನ ಬಾಳ ದೋಣಿ
ಒಂದೇ ತೀರ ಸೇರಲಿ
ಹೂವು ಗಂಧ ಬೆರೆತಿರುವಂತೆ
ನಮ್ಮ ಬಾಳು ಕೂಡಲಿ
ಮುಗಿಯ ಬೇಕು ನಮ್ಮ ಕಥೆ
ಸುಖಾಂತದಲ್ಲಿ.. ಸುಖಾಂತದಲ್ಲಿ..
ನೀನೇಕೆ ಕೊರಗುವೆ
ಮಸಣದ ವಾಸಿಯೂ
ಮಹದೇವನಲ್ಲವೇ
ಮಸಣದ ಹೂವೆಂದು
ನೀನೇಕೆ ಕೊರಗುವೆ
No comments:
Post a Comment
Write Something about PK Music