Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

ಮುಗಿಲ ಮಲ್ಲಿಗೆಯೋ - Mugila Malligeyo Song Lyrics - Thayiya Hone

ಚಿತ್ರ: ತಾಯಿಯ ಹೊಣೆ
ಹಾಡು: ಮುಗಿಲ ಮಲ್ಲಿಗೆಯೋ
ನಟರು: ಅಶೋಕ್, ಸುಮಲತಾ
ಸಂಗೀತ: ಸತ್ಯಂ
ಗಾಯಕ: SPB
ಸಾಹಿತ್ಯ: ಚಿ ಉದಯಶಂಕರ್


ಮುಗಿಲ ಮಲ್ಲಿಗೆಯೋ
ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ ಓಓಓ
ಕನಸಿನ ಸಿರಿಯೋ
ಮುಗಿಲ ಮಲ್ಲಿಗೆಯೋ..
ಗಗನದ ತಾರೆಯೋ..
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ ಓಓಓ
ಕನಸಿನ ಸಿರಿಯೋ
♬♬♬♬♬♬♬♬♬♬♬♬

ಅರಳಿದ ತಾವರೆ ಹೂವಿನ ಹಾಗೆ
ಚೆಲುವೆಯಾ ಮೊಗವು
ಆಅಆಅಆಅಆ
ಹುಂಹುಂ ಚಂದ್ರನ ಕಂಡ
ನೈದಿಲೆಯಂತೆ
ನಿನ್ನ ನಗುವ
ಕಾಮಿನಿಅರಗಿಣಿ
ನಿನ್ನ ನುಡಿಗಳು ವೀಣೆ ಸ್ವರಗಳು
ಅರಿಯದೆ ಹೋದೆ
ಓಓಓ ಗೆಳತಿ ಬೆರಗಾದೆ
ಮುಗಿಲ ಮಲ್ಲಿಗೆಯೋ..
ಗಗನದ ತಾರೆಯೋ
♬♬♬♬♬♬♬♬♬♬♬♬

ಮನದಲ್ಲಿ ತುಂಬಿ ಹೃದಯದಿ ತುಂಬಿ
ಆಸೆ ತಂದಿರುವೆ
ಆಅಆಅಆಅ
ಲಲಲಲ ಲಲಲಲ
ಆಆ ನೆನಪಲಿ ನಿಂತು ನಯನಗಳಲ್ಲಿ
ಕನಸ ತುಂಬಿರುವೆ
ಮೋಹವೋವಿರಹವೋ
ನಿನ್ನ ಸೇರದೆ ಕೂಡಿ ಬಾಳದೆ
ಜೀವ ನಿಲ್ಲುವುದೆ ಓಓಓ
ಶಾಂತಿ ದೊರಕುವುದೇ
ಮುಗಿಲ ಮಲ್ಲಿಗೆಯೋ..
ಗಗನದ ತಾರೆಯೋ..
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ ಓಓಓ
ಕನಸಿನ ಸಿರಿಯೋ
ಮುಗಿಲ ಮಲ್ಲಿಗೆಯೋಓಓಓ
ಗಗನದ ತಾರೆಯೋ

No comments:

Post a Comment

Write Something about PK Music

new1

new2

new5