Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕುರಿಗಳು ಸಾರ್ ಕುರಿಗಳು - Kurigalu Saar Kurigalu Song Lyrics - Nityotsava

Kurigalu Sir Kurigalu Song Lyrics from Nityotsava Kannada Album, Kurigalu Sir Kurigalu Bhavageethe Song was Released on Lahari Music.

                                                     

Nityotsava Kannada Album Released in 1 August 2014, Album has 14 Songs, Sung by Mysore Ananthaswamy, Jayshree, HK Narayana, Rathnamala Prakash, Shivamogga Subbanna, Pushpa, Jai Pal, Sandhya. Music Director is Mysore Ananthaswamy.

 

Kurigalu Sir Kurigalu Kannada Song Lyrics by K.S Nisar Ahmed, and the Song Composed by Mysore Ananthaswamy. Song Sung by Mysore Ananthaswamy.

 

About the Song

Album         

Nityotsava

Song

Kurigalu Sir Kurigalu

Music

Mysore Ananthaswamy

Lyrics

K.S Nisar Ahmed

Singer

Mysore Ananthaswamy

Music Label

Lahari Music

 

ಕುರಿಗಳು ಸಾರ್ ಕುರಿಗಳು

ಕುರಿಗಳು ಸಾರ್ ಕುರಿಗಳು

ಸಾಗಿದ್ದೇ ಗುರಿಗಳು

ಮಂದೆಯಲಿ ಒಂದಾಗಿ ಸ್ವಂತತೆಯೆ ಬಂದಾಗಿ

ಮಂದೆಯಲಿ ಒಂದಾಗಿ ಸ್ವಂತತೆಯೆ ಬಂದಾಗಿ

ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ

ದನಿ ಕುಗ್ಗಿಸಿ  ತಲೆ ತಗ್ಗಿಸಿ

ಅಂಡಲೆಯುವ ನಾವು ನೀವು

ಕುರಿಗಳು ಸಾರ್ ಕುರಿಗಳು

 

ಎಡ ದಿಕ್ಕಿಗೆ ಬಲ ದಿಕ್ಕಿಗೆ  

ಒಮ್ಮೆ ದಿಕ್ಕು ಪಾಲಾಗಿ

ಹೇಗೊ ಹೇಗೊ ಏಗುತಿರುವ

ಬರೀ ಕಿರುಚಿ ರೇಗುತಿರುವ

ನೊಣ ಕೂತರೆ ಬಾಗುತಿರುವ

ತಿನ್ನದಿದ್ದರು ತೇಗುತಿರುವ

ಹಿಂದೆ ಬಂದರೆ ಒದೆಯದ  

ಮುಂದೆ ಬಂದರೆ ಹಾಯದ

ನಾವು ನೀವು ಅವರು ಇವರು

ಕುರಿಗಳು ಸಾರ್ ಕುರಿಗಳು

 

ನಮ್ಮ ಕಾಯ್ವ ಕುರುಬರು, ಕುರುಬರು, ಕುರುಬರು

ನಮ್ಮ ಕಾಯ್ವ ಕುರುಬರು

ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು

ನಮ್ಮ ಕಾಯ್ವ ಕುರುಬರು

ಜಮಾಬಂದಿಗಮಲ್ದಾರ ಬರಲು  

ನಮ್ಮೊಳೊಬ್ಬನನ್ನಮೆಚ್ಚಿ  ಮಸೆದ

ಮಚ್ಚಹಿರಿದು ಕತ್ತ ಕಚಕ್ಕೆಂದು ಕೊಚ್ಚಿ

ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ

ಕಿಸೆಗೆ ಹಸಿರುನೋಟು ತುರುಕಿ  

ನುಡಿಗೆ ಬೆಣ್ಣೆ ಹಚ್ಚುವವರು

ನಮ್ಮ ಕಾಯ್ವ ಕುರುಬರು

ಬಿಸಿಲಿನಲ್ಲಿ ನಮ್ಮದೂಡಿ  ಬಿಸಿಲಲ್ಲಿ ನಮ್ಮದೂಡಿ  

ಮರದಡಿಯಲಿ ತಾವು ಕೂತು

ಬಿಸಿಲಿನಲ್ಲಿ ನಮ್ಮದೂಡಿ  

ಮರದಡಿಯಲಿ ತಾವು ಕೂತು

ಮಾತು  ಮಾತು  ಮಾತು  ಮಾತು

ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು

ನಮ್ಮ ಕಾಯ್ವ ಕುರುಬರು, ಕುರುಬರು, ಕುರುಬರು

 

ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ

ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ

ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು

ನಮ್ಮ ಕಾಯ್ವ ಕುರುಬರು, ಕುರುಬರು, ಕುರುಬರು

ತಳವೂರಿದ ಕುರುಬ ಕಟುಕನಾದ  

ತಳವೂರಿದ ಕುರುಬ ಕಟುಕನಾದ  

ಅವನ ಮಚ್ಚೊ ಆಹ! ಏನು ಹೊಳಪು  

ಏನು ಜಾದು  ಏನು ಮೋಹ!

ಕಣ್ಣುಕುಕ್ಕಿ ಸೊಕ್ಕಿರುವ ಕತ್ತನದಕೆ ತಿಕ್ಕಿರುವ  

ಹೋಗಿಹೋಗಿ ನೆಕ್ಕಿರುವ ನಾವು ನೀವು ಅವರು ಇವರು

ಕುರಿಗಳು ಸಾರ್ ಕುರಿಗಳು

-------------------------------------------------------

Nityotsava Album Songs Lyrics

 

-------------------------------------------------------

Nityotsava Song Karaoke


-------------------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

 

No comments:

Post a Comment

Write Something about PK Music

new1

new2

new5