ನಾನು ಹೋಗೋಕು ಮೊದ್ಲು ಒಂದು ಮಾತು ಹೇಳನೇ
ನೀನು ಹೇಳೋಕು ಮೊದ್ಲೇ ಕಿವಿಮುಚ್ಕೊಂಡ್ ಬಿಡನೇ
ನಾನು ಫ್ರೀಯಾಗಿ ಇದ್ದಾಗೆಲ್ಲ ಫೋನು ಮಾಡೋನೇ
ನಿನ್ನ ನಂಬರ್ನ ಈಗ್ಲೇ ನಾನು ಬ್ಲಾಕು ಮಾಡೋನೇ
ನೀನು ಫ್ರೀಯಾಗಿ ಇದ್ದಾಗೆಲ್ಲ ಫೋನು ಮಾಡೋನೇ
ನಿನ್ನ ನಂಬರ್ನ ಈಗ್ಲೇ ನಾನು ಬ್ಲಾಕು ಮಾಡೋನೆ
ಅಯ್ಯೋ ಅದ್ಯಾಕಂಗಾಡಿಯೇ ನಾ ಸಾರಿ ಕೇಳೇನೇ
ನಿನ್ನ ಸಾರಿನಾ ಮೋರಿಗೆಸ್ದು ತಬ್ಕಂಡ್ ಬಿಡುಮೆ
ಬೆಳದಿಂಗ್ಳ ಚಂದ್ರಂಗಿನ್ನ
ನೋಡೋಕೆ ತುಂಬಾ ಚೆನ್ನ
ನಿನ್ನ ಈ ಬ್ಯೂಟಿಫುಲ್ಲು ಐಸು
ಒಂದೇ ಲುಕ್ಕಲ್ಲಿ ಬೋಲ್ಡಾಯ್ತು ಮನ್ಸು
ಅತಿಯಾದ ಹಸಿಸುಳ್ಳ ಮಗುವಂತೆ ಕೆಳೋಕೀಗ
ಆಗಲ್ಲ ಪ್ಲೀಸ್ ನನ್ನ ಕ್ಷಮ್ಸು
ಇನ್ನ,,, ಡ್ರಾಮಾ ಮಾಡೋದು ಸಾಕು ನಿಲ್ಸು
ಪ್ರತಿ ಕೋಪಕೂ ಒಂದು ಅಂತ್ಯವಿದೆ..
ನನ್ನ ಮ್ಯಾಲೆ ನಿಂಗೆ ಪ್ರೀತಿ ಜಾಸ್ತಿ ಇದೆ
ನಿನ್ನ ಕಲ್ಪನೆ ಮಿತಿಮೀರುತಿದೆ..
ದಾರಿ ಬಿಡು ನಿನ್ನ ಟೈಮು ಮುಗಿದಿದೆ
ಅಯ್ಯೋ ಅದ್ಯಾಕಂಗಾಡಿಯೇ ನಾ ದಾರಿ ಬಿಡೆನೇ..
ನಿನ್ನ ದಾರಿಯ ತಪ್ಪ್ಸೋಕೊಂದು ಮುತ್ತು ಕೊಡನೇ
No comments:
Post a Comment
Write Something about PK Music