ಜಾನಪದಗಿತೆ
ತಾಯಿ ಹಡೆದವ್ಗಾ ನೆನಸೈತಿ ಜೀವ
ತಾಯಿ ಹಡೆದವ್ಗಾ ನೆನಸೈತಿ ಜೀವ
ಕಟ್ಟಿದ ಕನಸು ಒಡೆದು
ಚೂರಾಯಿತವ್ವಾ
ಎದೆ ಝಲ್ ಅಂತವ್ವಾ
ಎದೆ ಝಲ್ ಅಂತವ್ವಾ
ತಾಯಿ ಹಡೆದವ್ಗಾ ನೆನಸೈತಿ ಜೀವ
♫♫♫♫♫♫♫♫♫♫♫♫
ಹಾಲುತುಪ್ಪದ ತವರವ್ವಾ
ಗಂಜಿಗಿ ಗತಿ ಇಲ್ಲ್ ಇಲ್ಲವ್ವಾ ಇಲ್ಲವ್ವಾ
ಹಾಲುತುಪ್ಪದ ತವರವ್ವಾ
ಗಂಜಿಗಿ ಗತಿಇಲ್ಲ್ ಇಲ್ಲವ್ವಾ ಇಲ್ಲವ್ವಾ
ಹೊಟ್ಯಾಗ ಸಂಕಟ ನೋಡವ್ವಾ
ಬ್ರಹ್ಮಾಗಂಟ ಹಾಕ್ಯಾನವ್ವಾ ನಮವ್ವಾ
ನನ್ನ ಹಣೆಬರ ಕಥೆಯವ್ವಾ
ಯಾರಿಗಿ ಹೇಳಲಿ ದುಃಖವ್ವಾ
ನನ್ನ ಹಣೆಬರ ಕಥೆಯವ್ವಾ
ಯಾರಿಗಿ ಹೇಳಲಿ ದುಃಖವ್ವಾ
ಹೆಣ್ಣಾಗಿ ಹುಟ್ಟಬಾರದವ್ವಾ
ಎದೆ ಝಲ್ ಅಂತವ್ವಾ
ಎದೆ ಝಲ್ ಝಲ್ ಅಂತವ್ವಾ
ತಾಯಿ ಹಡೆದವ್ಗಾ ನೆನಸೈತಿ ಜೀವ
♫♫♫♫♫♫♫♫♫♫♫♫
ಗಂಡ ಕುಡಿದು
ಬರುತಾನ
ಹಾಂಡ್ಯ ಬಾಂಡ್ಯಾ
ಹೊಡಿತಾನ
ಹೊಡಿತಾನ
ಗಂಡ ಕುಡಿದು
ಬರುತಾನ
ಹಾಂಡ್ಯ ಬಾಂಡ್ಯಾ
ಹೊಡಿತಾನ
ಹೊಡಿತಾನ
ಹೊಲಸ ಬೈಗುಳ
ಬೈತಾನ
ಹೊಡಿತಾನ
ಬಡಿತಾನ ನಮ್ಮವ್ವ
ಬೂಟಾಕಾಲಲೀ
ಒದಿತಾನ
ಎಷ್ಟಂತ ತಾಳಲಿ
ನಾನಾ
ಬೂಟಾಕಾಲಲೀ
ಒದಿತಾನ
ಎಷ್ಟಂತ ತಾಳಲಿ
ನಾನಾ
ಇಂಥಾ ಗಂಡ
ಗಂಟಬಿದ್ದಾನವ್ವ
ಎದೆ ಝಲ್ ಅಂತವ್ವಾ
ಎದೆ ಝಲ್ ಝಲ್ ಅಂತವ್ವಾ
ತಾಯಿ ಹಡೆದವ್ಗಾ ನೆನಸೈತಿ ಜೀವ
♫♫♫♫♫♫♫♫♫♫♫♫
ಹೊಲಮನಿ ಎಲ್ಲಾ
ಮಾರ್ಯಾನ
ತವರಿನ ಬಂಗಾರ
ಬೇಡ್ತಾನ ಬೇಡ್ತಾನ
ಹೊಲಮನಿ ಎಲ್ಲಾ
ಮಾರ್ಯಾನ
ತವರಿನ ಬಂಗಾರ
ಬೇಡ್ತಾನ ಬೇಡ್ತಾನ
ಎಲ್ಲಾ ಹಾಳ್
ಮಾಡ್ಯಾನ
ಕೂಲಿ ಮಾಡಕ
ಹಚ್ಯಾನ ಹಚ್ಯಾನ
ಊರಾಗ ಸಾಲ
ಮಾಡ್ಯಾನ
ಕುಡಿದು ಮನೆಗೆ
ಬರುತಾನ
ಊರಾಗ ಸಾಲ
ಮಾಡ್ಯಾನ
ಕುಡಿದು ಮನೆಗೆ
ಬರುತಾನ
ಮಾನ ಮರ್ಯಾದ
ಎಲ್ಲ ಮಾರಿ ಬಿಟ್ಟಾನವ್ವ
ಎದೆ ಝಲ್ ಅಂತವ್ವಾ
ಎದೆ ಝಲ್ ಝಲ್ ಅಂತವ್ವಾ
ತಾಯಿ ಹಡೆದವ್ಗಾ ನೆನಸೈತಿ ಜೀವ
♫♫♫♫♫♫♫♫♫♫♫♫
ಚಿನ್ನದಂತಾ
ಮಗ ಹುಟ್ಯಾನ
ಅಪ್ಪನ ಹೆಸರು
ಇಟ್ಟೇನಾ ಇಟ್ಟೇನಾ
ಚಿನ್ನದಂತಾ
ಮಗ ಹುಟ್ಯಾನ
ಅಪ್ಪನ ಹೆಸರು
ಇಟ್ಟೇನಾ ಇಟ್ಟೇನಾ
ಮಗನ ನೋಡಲು
ಬಾರವ್ವ
ನಮ್ಮವ್ವ
ಹಡೆದವ್ವ ಬಾರವ್ವ
ಹರಕೆ ಹೊತ್ತು
ಹೆತ್ತೆನವ್ವ
ರೊಕ್ಕ ರೂಪಾಯಿ
ಬ್ಯಾಡವ್ವಾ
ಹರಕೆ ಹೊತ್ತು
ಹೆತ್ತೆನವ್ವ
ರೊಕ್ಕ ರೂಪಾಯಿ
ಬ್ಯಾಡವ್ವಾ
ನಿನ್ನ ಮುಖ
ಒಮ್ಮೆ ಬಂದು ತೋರವ್ವಾ
ಎದೆ ಝಲ್ ಅಂತವ್ವಾ
ಎದೆ ಝಲ್ ಝಲ್ ಅಂತವ್ವಾ
ತಾಯಿ ಹಡೆದವ್ಗಾ ನೆನಸೈತಿ ಜೀವ
♫♫♫♫♫♫♫♫♫♫♫♫
ಕೂಲಿ ನಾಲಿ
ಮಾಡ್ತೀನಿ
ಮಗನ ಚನ್ನಾಗಿ
ಬೆಳುಸ್ತೀನಿ ಬೆಳುಸ್ತೀನಿ
ಕೂಲಿ ನಾಲಿ
ಮಾಡ್ತೀನಿ
ಮಗನ ಚನ್ನಾಗಿ
ಬೆಳುಸ್ತೀನಿ ಬೆಳುಸ್ತೀನಿ
ಬಾಳ ಶಾಲಿ
ಕಲುಸ್ತೀನಿ
ಒಳ್ಳೆ ವ್ಯಕ್ತಿ
ಮಾಡ್ತೀನಿ ಮಾಡ್ತೀನಿ
ದೊಡ್ಡ ಸಾಹೇಬ
ಮಾಡ್ತೀನಿ
ಗಂಡಗ ಬುದ್ದಿ
ಕಲುಸ್ತೀನಿ
ದೊಡ್ಡ ಸಾಹೇಬ
ಮಾಡ್ತೀನಿ
ಗಂಡಗ ಬುದ್ದಿ
ಕಲುಸ್ತೀನಿ
ಹೆತ್ತ ತವರಿನ
ಕೀರ್ತಿ ತರತೀನಿ
ಎದೆ ಝಲ್ ಅಂತವ್ವಾ
ಎದೆ ಝಲ್ ಝಲ್ ಅಂತವ್ವಾ
ತಾಯಿ ಹಡೆದವ್ಗಾ ನೆನಸೈತಿ ಜೀವ
ತಾಯಿ ಹಡೆದವ್ಗಾ ನೆನಸೈತಿ ಜೀವ
No comments:
Post a Comment
Write Something about PK Music