ಚಿತ್ರ: ಕದಂಬ
ಸಂಗೀತ: ದೇವ
ಸಾಹಿತ್ಯ: ಕೆ. ಕಲ್ಯಾಣ್
ಗಾಯನ: ಎಸ್.ಪಿ.ಬಿ & ಚಿತ್ರ
ಯಾಮಿನೀ...
ಯಾರಮ್ಮ ನೀನು ಯಾಮಿನಿ
ಯಾಮಿನೀ..
ಯಾರಮ್ಮ ನೀನು ಯಾಮಿನಿ
ನಿನ್ನ ಚಂದವು ಚಂದ ಯಾಮಿನಿ
ನಿನ್ನ ಮುಗುಳ್ನಗು ಚಂದ ಯಾಮಿನಿ
ನಿನ್ನ ಸ್ಪರ್ಶವು ಚಂದ
ಯಾಮಿನಿ ಯಾಮಿನಿ ಯಾಮಿನಿ
ನಿನ್ನ ಬಿಂಕವು ಚಂದ ಯಾಮಿನಿ
ನಯ ನಾಚಿಕೆ ಚಂದ ಯಾಮಿನಿ
ಪಿಸುಕಾಟವು ಚಂದ
ಯಾಮಿನಿ ಯಾಮಿನಿ ಯಾಮಿನಿ
ಯಾಮಿನೀ...
ಯಾರಮ್ಮ ನೀನು ಯಾಮಿನಿ
♫♫♫♫♫♫♫♫♫♫♫♫
ನಕ್ಕರೆ ಚಂದ್ರನಿಗೆ ಸ್ಪೂರ್ತಿ
ನಡೆದರೆ ನವಿಲುಗಳಿಗೆ ಸ್ಪೂರ್ತಿ
ಹಾಡಲು ಕೋಗಿಲೆಗೆ ಸ್ಪೂರ್ತಿ
ನುಡಿದರೆ ಅರಗಿಣಿಗೆ ಸ್ಪೂರ್ತಿ
ನಿಂತರೆ ಸೂರ್ಯನಿಗೆ ಸ್ಪೂರ್ತಿ
ನಡತೆಯಲಿ ರಾಮನಿಗೂ ಸ್ಪೂರ್ತಿ
ಹೆಣ್ಣಿನಾ ವಿಷಯದಲಿ ಇವನು
ಈ ನಮ್ಮ ಕರುನಾಡಿಗೆ ಸ್ಪೂರ್ತಿ
ಸೌಂದರ್ಯ ಅನ್ನೋದು
ಹೆಣ್ಣೀಗೆ ಸ್ವಂತ
ಈ ಸೌಂದರ್ಯ ನಿನದೆ ಅಂತ ಗೊತ್ತಾ
ಯಾಮಿನೀ...
ಯಾರಮ್ಮ ನೀನು ಯಾಮಿನಿ
ಯಾಮಿನೀ.. ಯಾರಮ್ಮ
ನೀನು ಯಾಮಿನಿ
♫♫♫♫♫♫♫♫♫♫♫♫
ವಯಸಿಗೆ ಕಿವಿಗಳೆ ಕೇಳಿಸದು
ಚೆಲುವಿಗೆ ಕಣ್ಗಳೆ ಕಾಣಿಸದು
ಮನಸಿಗೆ ಹೊಸತರ ಗಂಧವಿದು
ಜನುಮಕು ಮರೆಯದ ಬಂಧವಿದು
ಬಾಳಲಿ ಸಾವಿರ ತಿರುವು ಇದೆ
ಎಲ್ಲಕೂ ಪ್ರೀತಿಯ ಗುರುತು ಇದೆ
ಪ್ರೀತಿಸೊ ಹೃದಯವು ಇಲ್ಲಿರಲು
ಯೋಚಿಸೊ ಸಮಯವು ಎಲ್ಲಿ ಇದೆ
ಈ ಭೂಮಿ ತಿರುಗೋದು
ಹೇಗಂತ ಗೊತ್ತಾ..
ನೀ ಕುಣಿಯೋ ಕಾಲ್ಗೆಜ್ಜೆ ಸುತ್ತಾ
ಯಾಮಿನೀ...
ಯಾರಮ್ಮ ನೀನು ಯಾಮಿನಿ
ಯಾಮಿನೀ ಯಾರಮ್ಮ
ನೀನು ಯಾಮಿನಿ
ನಿನ್ನ ಚಂದವು ಚಂದ ಯಾಮಿನಿ
ನಿನ್ನ ಮುಗುಳ್ನಗು ಚಂದ ಯಾಮಿನಿ
ನಿನ್ನ ಸ್ಪರ್ಶವು ಚಂದ
ಯಾಮಿನಿ ಯಾಮಿನಿ ಯಾಮಿನಿ
ನಿನ್ನ ಬಿಂಕವು ಚಂದ ಯಾಮಿನಿ
ನಯ ನಾಚಿಕೆ ಚಂದ ಯಾಮಿನಿ
ಪಿಸುಕಾಟವು ಚಂದ
ಯಾಮಿನಿ ಯಾಮಿನಿ ಯಾಮಿನಿ
ಯಾಮಿನೀ..
ಯಾರಮ್ಮ ನೀನು ಯಾಮಿನಿ
ಯಾಮಿನೀ..
ಯಾರಮ್ಮ ನೀನು ಯಾಮಿನಿ
No comments:
Post a Comment
Write Something about PK Music